ಚೀನಾದ ಸಂಚಿನ ಕುರಿತು ಎಚ್ಚರದಿಂದಿರಬೇಕು: ಸಚಿವ ಎಸ್‌. ಜೈಶಂಕರ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ-ಚೀನಾ ಸಂಬಂಧಗಳನ್ನು ನಿರ್ಬಂಧಿಸುವ ಚೀನಾದ ‘ಸಂಚಿ’ನ ಬಗ್ಗೆ ಎಚ್ಚರದಿಂದಿರಬೇಕು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ ಹೇಳಿದ್ದಾರೆ.

ದೆಹಲಿಯಲ್ಲಿ ನಡೆದ ರೈಸಿನಾ ಸಂವಾದ 2024 ರ ಎರಡನೇ ದಿನದಂದು ಮಾತನಾಡಿದ ಅವರುಉಭಯ ದೇಶಗಳ ಸಂಬಂಧವನ್ನು ‘ಸಮತೋಲನ’ ಸ್ಥಿತಿಗೆ ತರಲು ಜಾಗತಿಕವಾಗಿ ಲಭ್ಯವಿರುವ ಇತರ ಅವಕಾಶಗಳನ್ನು ಭಾರತವು ಬಿಟ್ಟುಕೊಡಬಾರದು ಎಂದು ಅಭಿಪ್ರಾಯಪಟ್ಟರು.

ಪೂರ್ವ ಲಡಾಖ್ ನ ಗಡಿ ವಿವಾದವನ್ನು ಪ್ರಚೋದಿಸಿದ 1980 ರ ದಶಕದ ಉತ್ತರಾರ್ಧದಲ್ಲಿ ಜಾರಿಗೆ ಬಂದ ಗಡಿ ಒಪ್ಪಂದಗಳಿಂದ ಹೊರಗುಳಿಯುವ ಚೀನಾದ ನಿರ್ಧಾರವನ್ನು ಪ್ರತಿಪಾದಿಸಿದ ಜೈಶಂಕರ್, ಸಮತೋಲನವನ್ನು ತಲುಪುವುದು ಮತ್ತು ಅದನ್ನು ಕಾಪಾಡಿಕೊಳ್ಳುವುದು ಭಾರತ ಮತ್ತು ಚೀನಾ ಎದುರಿಸುತ್ತಿರುವ ಅತಿದೊಡ್ಡ ಸವಾಲುಗಳಲ್ಲಿ ಒಂದಾಗಿದೆ ಎಂದು ಹೇಳಿದರು.
ಇದೀಗ ಸುಮಾರು 30 ವರ್ಷಗಳ ಬಳಿಕ ಚೀನಾ ಆ ಒಪ್ಪಂದದಿಂದ ದೂರ ಸರಿದಿರುವುದರಿಂದ ಗಡಿಯಲ್ಲಿ ಸಂಘರ್ಷದ ಸ್ಥಿತಿ ನೆಲೆಸಿದೆ ಎಂದರು.

ವಿವಾದಗಳನ್ನು ‘ಕೇವಲ ನಮ್ಮಿಬ್ಬರ ನಡುವಿನ ವಿಚಾರ’ ಎಂದು ಬಿಂಬಿಸುವ ಮೂಲಕ ಇತರ ದೇಶಗಳನ್ನು ಹೊರಗಿಡಲು ಚೀನಾ ಪ್ರಯತ್ನಿಸುತ್ತಿದೆ. ಜಗತ್ತಿನಲ್ಲಿರುವ ಇತರ 190ಕ್ಕೂ ಅಧಿಕ ದೇಶಗಳಿಗೆ ನಮ್ಮಿಬ್ಬರ ನಡುವಣ ಸಂಬಂಧದಲ್ಲಿ ಯಾವುದೇ ಪಾತ್ರವಿಲ್ಲ ಎನ್ನುತ್ತಿದೆ. ಅದು ಚೀನಾದ ಸಂಚಿನ ಭಾಗವಷ್ಟೆ. ಏಕೆಂದರೆ, ಉಭಯ ದೇಶಗಳ ನಡುವಣ ಸಂಬಂಧ ಸುಧಾರಣೆಗೆ ಜಾಗತಿಕವಾಗಿ ಲಭ್ಯವಿರುವ ಇತರ ಅವಕಾಶಗಳನ್ನೂ ನಮಗೆ ಬಳಸಿಕೊಳ್ಳಬಹುದು. ನಾವು ಆ ಹಕ್ಕನ್ನು ಏಕೆ ತ್ಯಜಿಸಬೇಕು’ ಎಂದು ಅವರು ಪ್ರಶ್ನಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!