ಅಟ್ಟಾರಿ-ವಾಘಾ ಗಡಿಯಲ್ಲಿ ಬೀಟಿಂಗ್‌ ರಿಟ್ರೀಟ್‌: ಯೋಧರ ದಿಟ್ಟ ಹೆಜ್ಜೆಗಳಿಗೆ ಜನರ ಉದ್ಗಾರ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಪಂಜಾಬ್‌ನ ಅಮೃತಸರದ ಅಟ್ಟಾರಿ-ವಾಘಾ ಗಡಿಯಲ್ಲಿ ಬೀಟಿಂಗ್‌ ರಿಟ್ರೀಟ್‌ ಸಮಾರಂಭ ನಡೆಯಿತು.

ಗಡಿ ಭದ್ರತಾ ಪಡೆಯ (ಬಿಎಸ್‌ಎಫ್‌) ಯೋಧರು ಅಟ್ಟಾರಿ-ವಾಘಾ ಗಡಿಯಲ್ಲಿ ಬೀಟಿಂಗ್‌ ರಿಟ್ರೀಟ್‌ ನಡೆಸಿದರು.ಗಡಿ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ಯೋಧರು ಒಂದೊಂದು ಘೋಷಣೆ ಮತ್ತು ಶೌರ್ಯಯುತ ಚಲನೆ ಮತ್ತೊಮ್ಮೆ ದೇಶವಾಸಿಗಳ ಹೃದಯದಲ್ಲಿ ದೇಶಭಕ್ತಿಯ ಅಲೆಯನ್ನ ಎಬ್ಬಿಸಿದೆ.

ಚಪ್ಪಾಳೆ ತಟ್ಟಿ, ಭಾರತ್‌ ಮಾತಾ ಕಿ ಜೈ, ವಂದೇ ಮಾತರಂ ಘೋಷಣೆಗಳನ್ನು ಕೂಗಿ ಜನರು ಸಂಭ್ರಮದಲ್ಲಿ ಭಾಗಿಯಾದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!