Wednesday, July 6, 2022

Latest Posts

‘ಬೀಟಿಂಗ್​ ದಿ ರಿಟ್ರೀಟ್’: ಆಗಸದಲ್ಲಿ ಮೂಡಿಬಂತು ಭಾರತದ ವೈಭವದ ಚಿತ್ತಾರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

73ನೇ ಗಣರಾಜ್ಯೋತ್ಸವದ ಸಮಾರೋಪ ಸಮಾರಂಭ ಅಂಗವಾಗಿ ದೆಹಲಿಯ ವಿಜಯ್​ ಚೌಕ್​​ನಲ್ಲಿ ‘ಬೀಟಿಂಗ್ ದಿ ರಿಟ್ರೀಟ್’​ ನಡೆಯಿತು.
ಈ ವೇಳೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮೂರು ಸಶಸ್ತ್ರ ಪಡೆಗಳ ಮುಖ್ಯಸ್ಥರು ಹಾಜರಿದ್ದರು.
ಬೀಟಿಂಗ್ ದಿ ರಿಟ್ರೀಟ್ ಸಮಾರಂಭದ ಭಾಗವಾಗಿ ಮಿಲಿಟರಿ ಬ್ಯಾಂಡ್ ಗಳು ‘ಏಯ್ ಮೇರೆ ವತನ್ ಕೆ ಲೋಗೋ’ ಸಂಗೀತ ನುಡಿಸಿದರೆ, ಇತ್ತ 1000 ಡ್ರೋನ್​​ಗಳಿಂದ ಲೈಟ್ ಶೋ ನಡೆಸಲಾಯಿತು.ಸುಮಾರು 10 ನಿಮಿಷಗಳ ಕಾಲ ನಡೆದ ಡ್ರೋನ್​ ಹಾರಾಟ ಸಮಾರಂಭದಲ್ಲಿ ಭಾರತದ ಭಾವುಟ ಮೂಡಿಸಲಾಯಿತಲ್ಲದೇ ವೀರ ಸೈನಿಕರಿಗೆ ವಂದನೆ ಸಲ್ಲಿಸಲಾಯಿತು.
ಮೇಕ್ ಇನ್ ಇಂಡಿಯಾದ ಲೋಗೋ, ಯುದ್ಧ ಸ್ಮಾರಕ, ಆತ್ಮ ನಿರ್ಭರ್ ಭಾರತ ಸೇರಿದಂತೆ ಅನೇಕ ಲಾಂಛನಗಳು ಡ್ರೋನ್​ ಲೈಟ್‌ನಲ್ಲಿ ಆಗಸದಲ್ಲಿ ಚಿತ್ತಾರ ಮೂಡಿತು.
ಇದೇ ವೇಳೆ ವಿಜಯ್​​ ಚೌಕ್​​ನಲ್ಲಿ ವಂದೇ ಮಾತರಂ ಘೋಷಣೆ ಮೊಳಗಿತು.
ಭಾರತದ ಸ್ವಾತಂತ್ರ್ಯ ಹೋರಾಟ ಮತ್ತು ಸ್ವಾತಂತ್ರ್ಯದ ನಂತರ ರಾಷ್ಟ್ರದ ಪ್ರಯಾಣವನ್ನು ಲೇಸರ್ ಪ್ರೊಜೆಕ್ಷನ್ ಬಳಸಿ ನಿರೂಪಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss