BEAUTY | ಗ್ರೀನ್ ಟೀ ಕುಡಿದ ಮೇಲೆ ಟೀ ಬ್ಯಾಗ್ ನ ಬಿಸಾಕ್ತಿರಾ, ಬದಲಿಗೆ ಈ ಬ್ಯೂಟಿ ಟಿಪ್ಸ್ ಫಾಲೋ ಮಾಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಳಗ್ಗೆ ಗ್ರೀನ್ ಟೀ ಕುಡಿಯುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಈ ಮೂಲಕ ನೀವು ಕುಡಿದ ಟೀ ಬ್ಯಾಗ್ ಅನ್ನು ಕಸದ ಬುಟ್ಟಿಗೆ ಎಸೆಯುವ ಬದಲು ಮರುಬಳಕೆ ಮಾಡಬಹುದು.

How To Make Green Tea – 3 Simple Brewing Methods

ಈ ಚಹಾದ ಎಲೆಗಳು ಆಂಟಿ ಏಜಿಂಗ್ ಗುಣವಿದ್ದು ಇದನ್ನು ತ್ವಚೆಗೆ ಬಳಸಿದಲ್ಲಿ ನಿಮ್ಮ ವಯಸ್ಸನ್ನು ಮತ್ತಷ್ಟು ಕಡಿಮೆ ಮಾಡಬಹುದು. ಇದು ಮೊಡವೆಗಳನ್ನು ತಡೆಯಬಹುದು. ಇದನ್ನು ಕಾಸ್ಮೆಟಿಕ್ ಉತ್ಪನ್ನವಾಗಿ ಹೇಗೆ ಬಳಸಬಹುದು ಎಂದು ನೋಡೋಣ.

Teabag Genmaicha Matcha-iri (28bags x 5g/0.18oz) - JAPANESE GREEN TEA | HIBIKI-AN

ನಿಮ್ಮ ಕಣ್ಣಿನ ಕೆಳಗೆ ಊದಿಕೊಂಡಿದ್ದರೆ, ಬಳಸಿದ ಟೀ ಬ್ಯಾಗ್ ಅನ್ನು ಫ್ರೀಜರ್‌ನಲ್ಲಿ 30 ನಿಮಿಷಗಳ ಕಾಲ ಇರಿಸಿ, ನಂತರ ಅದನ್ನು ನಿಮ್ಮ ಊದಿಕೊಂಡ ಕಣ್ಣಿನ ಮೇಲೆ ಇರಿಸಿ 5 ನಿಮಿಷಗಳ ಕಾಲ ನಿಮ್ಮ ಕಣ್ಣುಗಳನ್ನು ಮುಚ್ಚಿ ಮಲಗಿಕೊಳ್ಳಿ. ಇದು ಪಫಿನೆಸ್ ಅನ್ನು ಹೋಗಲಾಡಿಸುವುದು ಮಾತ್ರವಲ್ಲದೆ ಕಣ್ಣಿನ ಕೆಳಗಿನ ಕಪ್ಪು ಕಲೆಗಳನ್ನ ಸರಿಪಡಿಸುತ್ತದೆ.

Unusual uses of teabag which you might not be knowing - The Statesman

ಟೀ ಬ್ಯಾಗ್‌ನಲ್ಲಿರುವ ಎಲೆಗಳು ಸ್ಟ್ರೈನರ್ ಆಗಿಯೂ ಕಾರ್ಯನಿರ್ವಹಿಸುತ್ತವೆ. ನಿಮ್ಮ ಮುಖಕ್ಕೆ ಕಾಂತಿಯನ್ನು ನೀಡುತ್ತದೆ. ಚಹಾ ಎಲೆಗಳು ಬ್ಯಾಕ್ಟೀರಿಯಾದ ವಿರುದ್ಧ ಹೋರಾಡುತ್ತವೆ ಮತ್ತು ಮೊಡವೆಗಳಿಗೆ ಚಿಕಿತ್ಸೆ ನೀಡುತ್ತವೆ. ಜೊತೆಗೆ, ಇದು ಕೊಳೆಯನ್ನು ಸಹ ತೆಗೆದುಹಾಕುತ್ತದೆ.

Plastic in Tea Bags: What You Need to Know

ಚಹಾವನ್ನು ಕುದಿಸಿದ ನಂತರ, ನಿಮ್ಮ ತುಟಿಗಳ ಮೇಲೆ ಟೀ ಬ್ಯಾಗ್ ಅನ್ನು ಹಾಕಬಹುದು ಮತ್ತು ಒಡೆದ ತುಟಿಗಳನ್ನು ಹೋಗಲಾಡಿಸುತ್ತದೆ. ಈ ಟೀ ಬ್ಯಾಗ್ ಅನ್ನು ಸೂರ್ಯನ ರಕ್ಷಣೆಯಾಗಿಯೂ ಬಳಸಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!