DIGEST | ಹಬ್ಬದೂಟ ಭರ್ಜರಿ ಬ್ಯಾಟಿಂಗ್ ಮಾಡಿ ಹೊಟ್ಟೆ ಕೆಟ್ಟೋಗಿದ್ರೆ ಈ ಫಾರ್ಮುಲಾ ಟ್ರೈ ಮಾಡಿ

ಹಬ್ಬದ ನಿಮಿತ್ತ ಮನೆಯಲ್ಲಿ ನಾನಾ ಬಗೆಯ ಖಾದ್ಯಗಳನ್ನು ಬಡಿಸಲಾಗುತ್ತದೆ. ಮನೆಯಲ್ಲಿ ರೆಡಿಯಾದ ಅಡುಗೆಯನ್ನು ಹಾಗೆಯೇ ಬಿಡಲಾದೀತೆ? ಸ್ವಲ್ಪ ಜಾಸ್ತಿಯೇ ಸೇವಿಸುತ್ತಾರೆ. ಹೀಗೆ ಜಾಸ್ತಿ ಊಟ ಮಾಡಿದ ಬಳಿಕ ಸಂಕಟ ಉಂಟಾಗುತ್ತದೆ. ನಿಮ್ಮ ಸಂಕಟವನ್ನು ದೂರ ಮಾಡಲು ಉಪಾಯ ಇಲ್ಲಿದೆ.

ಹಸಿ ಶುಂಠಿ, ಹಸಿ ಅರಿಶಿನ, ದಾಲ್ಚಿನ್ನಿ ಮತ್ತು ಅರ್ಧ ನಿಂಬೆಹಣ್ಣು ತೆಗೆದುಕೊಳ್ಳಿ. ಮೊದಲು ಹಸಿ ಶುಂಠಿ ಮತ್ತು ಹಸಿ ಅರಿಶಿನವನ್ನು ತುರಿದುಕೊಳ್ಳಿ. ಅದನ್ನು ಒಂದು ಪಾತ್ರೆಯಲ್ಲಿ ನೀರು ಹಾಕಿ ಕುದಿಸಿ. ಅದಕ್ಕೆ ದಾಲ್ಚಿನ್ನಿ ಹಾಗೂ ಅರ್ಧ ನಿಂಬೆ ರಸ ಹಾಕಿ 10 ನಿಮಿಷ ಕುದಿಸಿ. ಬಳಿಕ ಸೇವಿಸಿ. ಅರ್ಧ ಗಂಟೆಯೊಳಗೆ ನಿಮ್ಮ ಹೊಟ್ಟೆ ಸರಿ ಆಗೋದು ಪಕ್ಕಾ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!