Tuesday, March 28, 2023

Latest Posts

ಅಣ್ಣನ ಮದುವೆಯಲ್ಲಿ ಗೊಂಬೆಯಂತೆ ಮಿಂಚಿದ ಬ್ಯೂಟಿ ಪೂಜಾ ಹೆಗ್ಡೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಸಿನಿಮಾ ರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ ಸೌತ್ ಬ್ಯೂಟಿ ಪೂಜಾ ಹೆಗ್ಡೆ (Pooja Hegde) ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಪೂಜಾ ಅಣ್ಣನ ಮದುವೆ ಅದ್ದೂರಿಯಾಗಿ ನಡೆದಿದ್ದು, ಈ ಕುರಿತ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ತಮಿಳು, ತೆಲುಗು, ಹಿಂದಿ ಚಿತ್ರರಂಗದಲ್ಲಿ ಬ್ಯುಸಿಯಿರುವ ನಟಿ ಪೂಜಾ ಹೆಗ್ಡೆ ಅವರ ಅಣ್ಣ ರಿಷಬ್ ಹೆಗ್ಡೆ ಮದುವೆಯಲ್ಲಿ ಪೂಜಾ ಗೊಂಬೆಯಂತೆ ಮಿಂಚಿದ್ದಾರೆ. ಕೇಸರಿ ಬಣ್ಣದ ಸೀರೆಯುಟ್ಟು ಮದುವೆಯಲ್ಲಿ ಸಂಭ್ರಮಿಸಿದ್ದಾರೆ.

ಈ ವೇಳೆ ಭಾವುಕ ಬರಹ ಮೂಲಕ ಅತ್ತಿಗೆಗೆ ಸ್ವಾಗತ ಕೋರಿದ್ದಾರೆ. ನನ್ನ ಸಹೋದರ ಆತನ ಜೀವನದ ಪ್ರೀತಿಯನ್ನು ಮದುವೆಯಾಗಿದ್ದಾನೆ. ಎಂತಹ ಏರಿಳಿತದ ವಾರ ಅದಾಗಿತ್ತು. ನಾ ಸಂತೋಷದಿಂದ ಕಣ್ಣೀರಿಟ್ಟೆ, ಜೊತೆ ಜೊತೆಗೆ ಮಗುವಿನಂತೆ ನಕ್ಕೆ, ಅಣ್ಣ ನೀನು ನಿನ್ನ ಜೀವನದ ಮತ್ತೊಂದು ಹಂತಕ್ಕೆ ಕಾಲಿರಿಸಿದ್ದು, ನಿನ್ನ ಜೀವನದಲ್ಲಿ ಪ್ರೀತಿ ಶಾಂತಿ ಎಲ್ಲವೂ ತುಂಬಿರಲಿ.

ವೈದ್ಯರಾಗಿರುವ ರಿಷಬ್ ಹೆಗ್ಡೆ, ಶಿವಾನಿ ಸಾಕಷ್ಟು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇದೀಗ ಬಹುಕಾಲದ ಗೆಳತಿಯ ಜೊತೆ ಪೂಜಾ ಸಹೋದರ ಸಪ್ತಪದಿ ತುಳಿದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!