ನಮಗೆ ಆರೋಗ್ಯವಂತ ಮತ್ತು ಮೃದುವಾದ ಚರ್ಮ ಬೇಕು ಅನ್ನೋದು ಸಹಜ. ಆದರೆ ಚರ್ಮದ ಆರೈಕೆಯನ್ನು ಪ್ರಾರಂಭಿಸುವಾಗ ಕೆಲವೊಮ್ಮೆ ಅನಿವಾರ್ಯವಾಗಿ ಕೆಲವು ಸಾಮಾನ್ಯ ತಪ್ಪುಗಳನ್ನು ಮಾಡುತ್ತೇವೆ. ಈ ತಪ್ಪುಗಳು ನಮ್ಮ ಚರ್ಮದ ಆರೋಗ್ಯವನ್ನು ಹಾಳು ಮಾಡಬಹುದು ಅಥವಾ ಉತ್ತಮ ಫಲಿತಾಂಶಗಳನ್ನು ತಡೆಯಬಹುದು. ಇಂತಹ ತಪ್ಪುಗಳನ್ನು ಮಾಡದಿರುವುದು ಅತ್ಯಂತ ಅವಶ್ಯಕ.
ಸರಿಯಾದ ಚರ್ಮದ ಪ್ರಕಾರವನ್ನು ಅರ್ಥಮಾಡಿಕೊಳ್ಳದೆ ಉತ್ಪನ್ನಗಳನ್ನು ಬಳಸುವುದು:
ಪ್ರತಿಯೊಬ್ಬರ ಚರ್ಮ ವಿಭಿನ್ನವಾಗಿರುತ್ತದೆ – ಡ್ರೈ , ಆಯಿಲ್ ಸ್ಕಿನ್, ನಾರ್ಮಲ್ ಸ್ಕಿನ್ ಅಥವಾ ಸೆನ್ಸಿಟಿವ್ ಸ್ಕಿನ್ ಗೆ ಹೊಂದುವಂತಹ ಉತ್ಪನ್ನಗಳನ್ನು ಆಯ್ಕೆ ಮಾಡದೆ ಎಲ್ಲರಿಗೂ ಸರಿಹೊಂದುತ್ತದೆ ಅನ್ನುವ ಭಾವನೆಯಿಂದ ಉಳಿತಾಯ ಅಥವಾ ಪ್ರಚಾರದ ಆಧಾರದಲ್ಲಿ ಉತ್ಪನ್ನಗಳನ್ನು ಬಳಸುವುದು ತೀವ್ರ ತೊಂದರೆ ತಂದೀತು.
ಹೆಚ್ಚು ಉತ್ಪನ್ನಗಳನ್ನು ಒಟ್ಟಿಗೆ ಬಳಸುವುದು (Overloading the skin)
ಬೇರೆ ಬೇರೆ ಸೀರಮ್, ಕ್ರೀಮ್, ಟೋನರ್ ಮುಂತಾದವುಗಳನ್ನು ಒಂದೇ ಸಮಯದಲ್ಲಿ ಬಳಸುವ ಬದಲು, ಏಕೆ ಬಳಸುತ್ತಿದ್ದಾರೆ ಎಂಬುದನ್ನು ತಿಳಿದು ಕ್ರಮವಾಗಿ ಉಪಯೋಗಿಸಬೇಕು. ಹೆಚ್ಚು ಉತ್ಪನ್ನಗಳು ಚರ್ಮದ ಮೇಲೆ ಅಲರ್ಜಿ ಉಂಟುಮಾಡಬಹುದು ಅಥವಾ ಪ್ರತಿಕೂಲ ಪರಿಣಾಮ ಬೀರಬಹುದು.
ಸನ್‌ಸ್ಕ್ರೀನ್ ಬಳಸದಿರುವುದು
ಇದು ಬಹುಮಾನ್ಯವಾದ ತಪ್ಪು. ಬಿಸಿಲಿನ ಕಿರಣಗಳು ಚರ್ಮವನ್ನು ಹಾನಿಗೊಳಿಸುತ್ತವೆ. ಸನ್‌ಸ್ಕ್ರೀನ್ ಇಲ್ಲದೆ ಹೊರಗಡೆ ಹೋಗುವುದರಿಂದ ಸಮಯದೊಂದಿಗೆ ಚರ್ಮ ಕಾಂತಿ ಕಳೆದುಕೊಳ್ಳುತ್ತದೆ. ಕಲೆಗಳು ಮೂಡುತ್ತವೆ ಮತ್ತು ಕ್ಯಾನ್ಸರ್‌ನಂತಹ ಗಂಭೀರ ಸಮಸ್ಯೆಗಳಿಗೂ ಕಾರಣವಾಗಬಹುದು.
ತಕ್ಷಣ ಫಲಿತಾಂಶ ನಿರೀಕ್ಷಿಸುವುದು
ಚರ್ಮದ ಆರೈಕೆ ಒಂದು ಸಹನೆಯ ಪ್ರಕ್ರಿಯೆ. ಒಂದೆರಡು ದಿನಗಳಲ್ಲಿ ಅಥವಾ ವಾರಗಳಲ್ಲಿ ಪರಿಣಾಮಗಳು ಕಾಣಿಸಬೇಕೆಂದು ನಿರೀಕ್ಷಿಸಿ ಹೊಸ ಹೊಸ ಉತ್ಪನ್ನಗಳನ್ನು ಪರೀಕ್ಷಿಸುತ್ತಿದ್ದರೆ ಚರ್ಮದ ಸ್ಥಿತಿಯು ಇನ್ನಷ್ಟು ಕೆಟ್ಟದಾಗಬಹುದು. ಆದ್ದರಿಂದ ನಿರಂತರ ಬಳಕೆ ಮತ್ತು ಸಮಯ ನೀಡಿ ಕಾದು ನೋಡುವುದು ಮುಖ್ಯ.
ನಿದ್ರೆಯ ಕೊರತೆ ಮತ್ತು ನೀರಿನ ಕೊರತೆ ಕಡೆಗಣಿಸುವುದು
ಚರ್ಮದ ಆರೋಗ್ಯಕ್ಕೆ ಒಳಗಿನಿಂದಲೂ ಆರೈಕೆ ಬೇಕು. ಸಾಕಷ್ಟು ನಿದ್ರೆ ಮತ್ತು ದೇಹಕ್ಕೆ ತಂಪು ನೀರಿನ ಸರಬರಾಜು ಅತ್ಯಗತ್ಯ. ಇವೆರಡೂ ಸರಿಯಾಗಿ ಇಲ್ಲದಿದ್ದರೆ ಯಾವುದೇ ಉತ್ತಮ ಚರ್ಮದ ಆರೈಕೆ ಉತ್ಪನ್ನವೂ ಪರಿಣಾಮಕಾರಿಯಾಗುವುದಿಲ್ಲ.
ಬಾಲ್ಯದಿಂದಲೇ ಸರಿಯಾದ ಚರ್ಮದ ಆರೈಕೆಯ ಬಗ್ಗೆ ತಿಳಿದುಕೊಳ್ಳುವುದು ಮತ್ತು ಸದೃಢ ನಿಯಮಗಳನ್ನು ಅನುಸರಿಸುವುದು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಈ ತಪ್ಪುಗಳನ್ನು ತಪ್ಪಿಸಿ, ನಿಮ್ಮ ಮುಖದ ಅಂದ ಹೆಚ್ಚಿಸಿ.