ನ್ಯೂಸ್ ಆ್ಯಂಕರ್ ಆಯ್ತು, ಈಗ ಶಾಲೆಗೆ ಬಂದ್ರು ನೋಡಿ AI ‘ಐರಿಸ್’ ಮೇಡಂ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಸೇರಿ ಜಗತ್ತಿನ ಬಹುತೇಕ ರಾಷ್ಟ್ರಗಲ್ಲಿ ಛಾಪು ಮೂಡಿಸಿರುವ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಈಗಾಗಲೇ ಸುದ್ದಿ ಮಾಧ್ಯಮಕ್ಕೆ ಕಾಲಿಟ್ಟ ಎ.ಐ ನ್ಯೂಸ್ ಆ್ಯಂಕರ್​​ ಲೀಸಾ ಕುರಿತ ಸುದ್ದಿಗಳು ಭಾರಿ ಸದ್ದು ಮಾಡಿತ್ತು.

ಇದರ ಬೆನ್ನಲ್ಲೇ ಇದೀಗ ಕೇರಳದ (Kerala) ಶಾಲೆಯೊಂದು ಕೃತಕ ಬುದ್ಧಿಮತ್ತೆ ಆಧಾರಿತ ರೋಬೊ ಟೀಚರ್‌ಅನ್ನು (AI Teacher) ಪರಿಚಯಿಸುವ ಮೂಲಕ ಇತಿಹಾಸ ಸೃಷ್ಟಿಸಿದೆ.

ಮೇಕರ್‌ಲ್ಯಾಬ್ಸ್‌ ಎಜುಟೆಕ್‌ (Makerlabs Edutech) ಎಂಬ ಸಂಸ್ಥೆಯ ಸಹಯೋಗದಲ್ಲಿ ದೇಶದ ಮೊದಲ ಎಐ ಆಧಾರಿತ ರೋಬೊ ಟೀಚರ್‌ಅನ್ನು ಅಭಿವೃದ್ಧಿಪಡಿಸಲಾಗಿದ್ದು, ಇದಕ್ಕೆ ಐರಿಸ್‌ (Iris) ಎಂದು ಹೆಸರಿಡಲಾಗಿದೆ.

ಕಡುವಾಯಿಲ್‌ ಥಂಗಲ್‌ ಚಾರಿಟೇಬಲ್‌ ಟ್ರಸ್ಟ್‌ ಮುತುವರ್ಜಿ ವಹಿಸಿ, ತಿರುವನಂತಪುರಂನಲ್ಲಿರುವ ಕೆಟಿಸಿಟಿ ಸೆಕೆಂಡರಿ ಸ್ಕೂಲ್‌ನಲ್ಲಿ ಎಐ ಆಧಾರಿತ ರೋಬೊ ಟೀಚರ್‌ಅನ್ನು ಅಳವಡಿಸಿಕೊಳ್ಳಲಾಗಿದೆ. ಶಾಲೆಗಳಲ್ಲಿ ಇತರ ಚಟುವಟಿಕೆಗಳಿಗೂ ಉತ್ತೇಜನ ನೀಡುವ ದಿಸೆಯಲ್ಲಿ 2021ರಲ್ಲಿ ನೀತಿ ಆಯೋಗ ಜಾರಿಗೆ ತಂದ ಅಟಲ್‌ ಟಿಂಕರಿಂಗ್‌ ಲ್ಯಾಬ್‌ (ATL) ಯೋಜನೆಯ ನೆರವು ಕೂಡ ಇದರ ಭಾಗವಾಗಿದೆ. ಐರಿಸ್ ಮೂರು ಭಾಷೆಗಳನ್ನು ಮಾತನಾಡುವ ಸಾಮಾರ್ಥ್ಯವನ್ನು ಹೊಂದಿದ್ದು, ಸಂವಾದಾತ್ಮಕ ಕಲಿಕೆ, ಕುಶಲ ಸಾಮರ್ಥ್ಯಗಳು ಮತ್ತು ಚಲನಶೀಲತೆ ಸೇರಿದಂತೆ ವಿವಿಧ ವೈಶಿಷ್ಟ್ಯಗಳೊಂದಿಗೆ ವಿದ್ಯಾರ್ಥಿಗಳ ಕಷ್ಟಕರವಾದ ಪ್ರಶ್ನೆಗಳಿಗೂ ಉತ್ತರಿಸಬಲ್ಲ ಸಾಮಾರ್ಥ್ಯವನ್ನು ಹೊಂದಿದೆ.

ಹೊಸ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದೊಂದಿಗೆ ರಚಿಸಲಾದ ಈ AI ಜನರೇಟಿವ್ ಶಿಕ್ಷಕಿ ಮನುಷ್ಯರಂತೆ ಮಾತನಾಡುವ, ಇತರೆ ಶಿಕ್ಷಕರಂತೆ ಮಕ್ಕಳಿಗೆ ಉತ್ತಮವಾಗಿ ಪಾಠ ಮಾಡುವ, ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸುವ ಮತ್ತು ಮಕ್ಕಳಿಗೆ ಪ್ರೋತ್ಸಾಹವನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ. ಮೇಕರ್ ಲ್ಯಾಬ್ ಪ್ರಕಾರ, ಶಾಲೆಗಳಲ್ಲಿ ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಗಳನ್ನು ಹೆಚ್ಚಿಸಲು 2021 ರ NITI ಆಯೋಗ್ ಪ್ರಾರಂಭಿಸಿದ ಅಟಲ್ ಟಿಂಕರಿಂಗ್ ಲ್ಯಾಬ್ (ATL) ನ ಯೋಜನೆಯಡಿಯಲ್ಲಿ ಐರಿಸ್ ಅನ್ನು ತಯಾರಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!