Saturday, February 24, 2024

ಸವ೯ರಲ್ಲಿ ಸಮರಸತಾ ಭಾವ ಮೂಡಲಿ: ಮೋಹನ್ ಭಾಗವತ್

ಹೊಸದಿಗಂತ ವರದಿ,ಕಲಬುರಗಿ:

ಹಿಂದೂ ಸಮಾಜದ ದಲ್ಲಿ ಸಮರಸತಾ ಭಾವ ಮೂಡಿ,ಒಂದೆ ಕುಟುಂಬದ ಸದಸ್ಯರಂತೆ ಜೀವನ ನಡೆಸಬೇಕಾದ ಅನಿವಾರ್ಯತೆ ಇದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಪರಮ ಪೂಜನೀಯ ಮೋಹನ್ ಭಾಗವತ ಹೇಳಿದರು.

ಅವರು ನಗರದ ಖಮಿತಕರ ಸಭಾಂಗಣದಲ್ಲಿ ಆಯೋಜಿಸಿದ್ದ ಸಂಕ್ರಾಂತಿ ಉತ್ಸವದಲ್ಲಿ ಭಾಗವಹಿಸಿ, ಭೌದ್ದಿಕ ನೀಡಿ, ನಮ್ಮ ವ್ಯಕ್ತಿಗತ,ನಮ್ಮ ಕುಟಂಬದಲ್ಲಿ ನಾವೆಲ್ಲರೂ ಸಮರಸತಾ ಭಾವದಿಂದ ಇರುವುದನ್ನು ರೂಡಿಸಿಕೊಂಡಾಗ ಮಾತ್ರ, ಸಮಾಜದಲ್ಲಿ ಸಮರಸತಾ ಭಾವ ಬಿತ್ತಲು ಅನುಕೂಲ ಆಗುತ್ತದೆ ಎಂದರು.

ಸೂರ್ಯ ತನ್ನ ದೈನಂದಿನ ಕಾಯ೯ವನ್ನು ಹೇಗೆ ಚಾಚು ತಪ್ಪದೇ ಮಾಡುತ್ತಾನೇಯೋ, ನಾವು ಅದರಂತೆ ನಮ್ಮ ದೈನಂದಿನ ಚಟುವಟಿಕೆಗಳನ್ನು ಮಾಡುತ್ತಾ ಹೊಸ ಆಯಾಮಗಳಿಗೆ ಸ್ಪೂರ್ತಿ ನೀಡಬೇಕು ಎಂದರು. ಕ್ರಿಯಾ ಸಿದ್ದಿ, ಸಧ್ವೆ ಭವತೆ ಎಂಬ ಧ್ಯೇಯದೊಂದಿಗೆ, ಪರಿಸ್ಥಿತಿ ಏನೇ ಇರಲಿ ನಾವು ನಮ್ಮ ಕೆಲಸವನ್ನು ಸೂಯ೯ನಂತೆ ಪ್ರತಿನಿತ್ಯ ಮಾಡುತ್ತಾ ಬರಬೇಕು ಎಂದರು. ಪ್ರಪಂಚಕ್ಕೆ ಬೆಳಕು ಕೊಡುವ ಸೂರ್ಯ ತನ್ನ ಪರಿಣಾಮದ ಬಗ್ಗೆ ಚಿಂತನೆ ಮಾಡುವುದಿಲ್ಲ. ಬದಲಾಗಿ, ತನ್ನ ಕಾಯ೯ ಪೃವತ್ತಿಯಲ್ಲಿ ಮಾತ್ರ ತಲ್ಲಿನನಾಗಿರುತ್ತಾನೆ ಎಂದರು.

ಸಂಕ್ರಾಂತಿ ದಿನದಿಂದ ಸೂರ್ಯ ತನ್ನ ಚಲನವಲನವನ್ನು ಬದಲಾಯಿಸಿದರೂ, ನಿರಂತರವಾಗಿ ತನ್ನ ಕಾಯ೯ ಮಾಡುತ್ತಾ, ಪ್ರಕಾಶವನ್ನು ಬಿತ್ತುತ್ತಾ,ಚಲಿಸುತ್ತಿರುತ್ತಾನೆ. ಸಂಕ್ರಾಂತಿಯ ಮೂಲವೇ,ಜ್ಞಾನ ಮತ್ತು ಪ್ರಕಾಶ ಹೆಚ್ಚಾಗುವುದು ಎಂದರು.

ನಮ್ಮ ಸಂಘದ ಯೋಜನೆಯಂತೆ ನಮ್ಮ ಸ್ವಯಂಸೇವಕರು ಕಾಯ೯ ಮಾಡಬೇಕು.ಒಂದು ಕಾಲದ ಸಮಯದಲ್ಲಿ ಸಂಘದ ಬಹಿ ಶಕ್ತಿ ಇರಲಿಲ್ಲ. ಆದರೆ ನಮ್ಮ ಕಾಯ೯ ಎಂದು ನಿಂತಿಲ್ಲ. ವಿರೋಧಿಗಳು ಎಷ್ಟು ಅಪಪ್ರಚಾರ ಮಾಡಿದರು, ನಾವು ನಮ್ಮ ಸಾಧನೆಯ ಪಥದಲ್ಲಿ ಸಾಗಿದ್ದು, ನಮಗೆ ಸಾಧನೆಗಳ ಅನಿವಾರ್ಯತೆ ಇಲ್ಲ. ನಮ್ಮ ಗುರಿಯೊಂದಿಗೆ ನಾವು ಮುನ್ನೆಡೆದಿದ್ದೇವೆ. ಕೆಟ್ಟ ಪರಿಸ್ಥಿತಿ ದೂರವಾಗಿ, ಒಳ್ಳೆಯ ಸ್ಥಿತಿ ನಿಮಾ೯ಣವಾಗಿದೆ ಎಂದರು.

ನಮ್ಮ ದೇಶದ ಜನಸಂಖ್ಯೆ 130 ಕೋಟಿ ಇದ್ದರು, ನಮ್ಮ ಸ್ವಯಂಸೇವಕರ ಸಂಖ್ಯೆ 60-70 ಲಕ್ಷಕಿಂತ ಅಧಿಕ ಇಲ್ಲವೆಂದು ಸ್ಪಷ್ಟವಾಗಿ ಹೇಳಿದರು. ಸ್ವಯಂಸೇವಕರ ಸಾಧನಾ ಮಂತ್ರ ನಿರಂತರವಾಗಿ,ಸೂರ್ಯ ನಂತೆ ನಡೆಯುತ್ತಾ ಇರಬೇಕು ಎಂದರು.

ಸೂರ್ಯ ನ ಸತ್ವವೆನೆಂದರೆ, ಸೂರ್ಯ ನೂ ಒಬ್ಬ ಕಮ೯ಕಾರಿ, ಜ್ಞಾನ- ಪ್ರಕಾಶ ಅವನ ಒಂದು ರೂಪವಾಗಿದೆ. ಅದರಂತೆ ನಾವು ಸ್ವಯಂಸೇವಕ ಕಾಯ೯ವನ್ನು ಮಾಡುತ್ತಾ ಚಲಿಸುತ್ತಲೇ ಇರಬೇಕು. ನಮ್ಮ ಸಂಘಟನೆ ರಾಜಕೀಯ ವ್ಯಕ್ತಿಗಳಿಂದ ಆಗದು, ಬದಲಾಗಿ ನಮ್ಮ ಶಕ್ತಿಯಿಂದಲೇ,ನಮ್ಮ ಸಂಘದ ಸಂಘಟನೆ ಬಲವಾಗಲಿದೆ ಎಂದರು. ಕಳೆಧ ಮೂರು ವಷ೯ಗಳಿಂದ ಸಂಘಕ್ಕೆ ಸಮಾಜದ ಒಲವು ಬಹಳಷ್ಟು ಹೆಚ್ಚಾಗಿದೆ. ಕೋವಿಡ ಸಮಯದಲ್ಲಿ ಆದಂತಹ ಸೇವಾ ಚಟುವಟಿಕೆಗಳು,ರಾಮ ಮಂದಿರ ನಿಧಿ ಸಂಗ್ರಹಣೆ ಸಮಯದಲ್ಲಿ ಈ ಒಲವು ಗೊತ್ತಾಗಿದೆ ಎಂದರು. ಸಮಾಜದ ಜನರು ನಮ್ಮ ಕಾಯ೯ ಶೈಲಿಯನ್ನು ನೋಡಿ, ನಮ್ಮ ಹಿಂದೆ ಬಂದು,ನಮ್ಮ ಕಾಯ೯ದಲ್ಲಿ ಕೈ ಜೋಡಿಸಲು ಮುಂದಾಗಿದ್ದು,ನಮ್ಮ ಸೌಭಾಗ್ಯ ಎಂದರು.

ಸಮರಸತೆಯ ಭಾವವನ್ನು ಎಲ್ಲಾ ಸಮಾಜದ ಮನಸ್ಸಿನಲ್ಲಿ ಬಿತ್ತಿ,ಅವರನ್ನು ನಮ್ಮವರು ಎಂಬ ಭಾವನೆ ಮೂಡಿಸುವ ಕೆಲಸ ಪ್ರತಿಯೊಬ್ಬನ ಗುರಿಯಾಗಬೇಕಿದೆ.ನಮ್ಮ ಕಡೆಯಿಂದ ಕಿಂಚಿತ್ತೂ ಸಮಾಜಕ್ಕೆ ತಪ್ಪು ಸಂದೇಶ ಹೋಗದ ಹಾಗೇ ಜಾಗೃತಿವಹಿಸುವ ಕಾಯ೯ ನಾವು ಮುಂದಿನ ದಿನಗಳಲ್ಲಿ ಮಾಡಬೇಕಿದೆ ಎಂದರು.

ಹಿಂದೂ ಜೀವನ ಪದ್ಧತಿ ಬಗ್ಗೆ ಸ್ವಯಂಸೇವಕರು ಗಮನಹರಿಸಿ,ಸ್ವದೇಶಿ ಉತ್ಪನ್ನಗಳ ಬಳಕೆ ಮಾಡುತ್ತಾ,ಅವುಗಳನ್ನು ಸಮಾಜದಲ್ಲಿ ಬಳಕೆ ಮಾಡುವಂತೆ ಜನರಿಗೆ ಪ್ರೇರೆಪಿಸಬೇಕಿದೆ. ನಮ್ಮ ಕುಟುಂಬದ ಸದಸ್ಯರು ನಮ್ಮ ಸಂಸ್ಕೃತಿ,ನಮ್ಮ ಪದ್ದತಿ ಅನುಸರಿಸುತ್ತಾರೆಯೋ,ಇಲ್ಲವೋ ಎಂಬ ಪ್ರಮುಖ ಅಂಶವನ್ನು ನಾವು ಗಮನಿಸಿ, ಅದನ್ನು ಬದಲಾವಣೆ ಮಾಡಬೇಕಿದೆ. ಇದೇ ತರಹವೇ ಸೂರ್ಯ ಕೂಡ ತನ್ನ ದಿನನಿತ್ಯದ ಕೆಲಸದಲ್ಲಿ ಇದೇ ರೀತಿ ಮುಂದುವರೆದು. ನಮಗೆ ಬೆಳಕು ನೀಡುತ್ತಿನೆ ಎಂದರು.

ಸಮಾಜಕ್ಕೆ ನಾವು ಸಮಯ ನೀಡೋಣ

ನೇತಾಗಿರಿಯಾಗದಿರಿ,ಬದಲಾಗಿ, ಕಾಯ೯ಕತ೯ನಾಗಿರಿ ಎಂದು ಹೇಳಿದ ಅವರು, ಸಮಾಜಕ್ಕೆ ನಾವು ಸಮಯ ನೀಡುವುದಕ್ಕೇ ನೇತಾಗಿರಿಯಾಗಿರಬೇಕೆಂದಿಲ್ಲ, ಕಾಯ೯ಕತ೯ನಾಗಿಯೂ ಸಮಾಜ ಸೇವೆ ಮಾಡಬಹುದು ಎಂದು ಕಿವಿ ಮಾತು ಹೇಳಿದರು.

ದಿನನಿತ್ಯದ ಚಟುವಟಿಕೆಗಳಲ್ಲಿ ಒಂದು ಗಂಟೆ ಶಾಖೆಗೆ ನೀಡಿ, 7 ಗಂಟೆ ಕುಟುಂಬದ ಸದಸ್ಯರು ಗೆ ನೀಡಿ. ಸಮಯ ನೀಡುವದರಿಂದ ಸಮಾಜದಲ್ಲಿ ಒಂದಿಷ್ಟು ಬದಲಾವಣೆ ತರಲು ಅನುಕೂಲ ಆಗುತ್ತದೆ ಎಂದರು.

ಸಂಘದ ವಿಸ್ತಾರಕರಾಗಿ ಸೇವೆ ಮಾಡಿ 

ವಿಧ್ಯಾರ್ಥಿ ಜೀವನದಲ್ಲಿ ಸಾಕಷ್ಟು ವಿಧ್ಯಾಭ್ಯಾಸ ಮುಗಿಸಿದ ವಿಧ್ಯಾಥಿ೯ಗಳು ಸಮಾಜದ ಚಿಂತನೆ ಮಾಡುವ ಮೂಲಕ ,ಸಮಾಜಕ್ಕೆ ಅಲ್ಪಸ್ವಲ್ಪ ಸಮಯ ನೀಡಬೇಕು. ತಾವು ತಮ್ಮ ಗುರಿಯಿರುವ ಮಟ್ಟಿಗೆ,ವಿಧ್ಯಾಭ್ಯಾಸ ಮಾಡಿ,ನಂತರ ಸಂಘದ ವಿಸ್ತಾರಕರಾಗಿ ಸಮಾಜದ ಸೇವೆ ಮಾಡಲು ಮುಂದೆ ಬರಬೇಕೆಂದು ಯುವಕರಿಗೆ ಕರೆ ನೀಡಿದರು. ಸಂಘವನ್ನು ಅರಿಯಲು,ಸಂಘದ ಶಾಖೆಗೆ ಬಂದಾಗ ಮಾತ್ರ ಅದು ಸಾಧ್ಯ ಎಂದರು.

ಸಮಾಜದಲ್ಲಿಯೂ ಸಹ ಸಂಘದ ಬಗ್ಗೆ ಅಪಾರವಾದ ಗೌರವ ದಿನೇ ದಿನೇ ಹೆಚ್ಚುತ್ತಲಿದೆ. ಸಮಾಜದ ಯಾವ ವ್ಯಕ್ತಿಯನ್ನು ಸಹ ಶಕ್ತಿ ಹೀನ ಎಂದು ಪರಿಗಣಿಸಬಾರದು ಎಂದು ಹೇಳುತ್ತಾ,2ನೇ ವಿಶ್ವ ಮಹಾ ಯುದ್ದದಲ್ಲಿನ ಉದಾಹರಣೆ ನೀಡಿದರು. ಈ ದೀಶೆಯಲ್ಲಿ ಸಾಗಿದಾಗ ಮಾತ್ರ. ನಮ್ಮ ಭಾರತ ಪರಮವೈಭವದ ಸ್ಥಿತಿಗೆ ತಲುಪಲಿದೆ ಎಂದರು.

ಸಂಘದ ಸ್ವಯಂಸೇವಕರು ಜಾಗೃತಿಯಿಂದ ತನ್ನ ಗುರಿಯೆಡೆ, ಸಾಗುತ್ತಾ,ಸಮಾಜದ ಸೇವೆಯಲ್ಲಿ ಭಾಗಿಯಾಗಬೇಕು. ಸೂರ್ಯ ಸತತ ತನ್ನ ಕಾಯ೯ವನ್ನು ಹೇಗೆ ಮಾಡುತ್ತಾ ಸಾಗುತ್ತಾನೋ,ಅದೇ ದಾರಿಯಲ್ಲಿ ಸ್ವಯಂಸೇವಕರು ಸಾಗಬೇಕು.ಇದೇ ಸಂಕ್ರಾಂತಿ ಹಬ್ಬದ ಅಥ೯ ಎಂದರು.
ನಾವು ನಡೆಯುತ್ತಾ,ನಮ್ಮ ಜೊತೆಗೆ ಸಮಾಜವನ್ನು ಸಹ ಮುನ್ನೆಡೆಸಿಕೊಂಡು, ಕಾಯ೯ ಪೃವತ್ತರಾಗೋಣ ಎಂದು ಹೇಳಿದರು.

ಸಂಕ್ರಾಂತಿ ಉತ್ಸವದ ನಿಮಿತ್ತ, ನಗರದ 11 ಕಡೆಗಳಲ್ಲಿ ಸಂಕ್ರಾಂತಿ ಉತ್ಸವದ ಆನಲೈನ ಮೂಲಕ ಕಾಯ೯ಕ್ರಮ ನಡೆಸಲಾಯಿತು. ಎಲ್ಲಾ ಸ್ಥಳಗಳಲ್ಲಿ ಪ್ರಾಂತ ಸ್ಥರದ ಅಧಿಕಾರಿಗಳು,ಮೇಲ್ಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾಯ೯ಕ್ರಮದಲ್ಲಿ ಕನಾ೯ಟಕ ಉತ್ತರ ಪ್ರಾಂತದ,ಪ್ರಾಂತ ಸಂಘಚಾಲಕರಾದ ಖಗೇಶನ ಪಟ್ಟಣಶೆಟ್ಟಿ, ಸಹ ಸಂಘಚಾಲಕರಾದ ಅರವಿಂದರಾವ್ ದೇಶಪಾಂಡೆ, ಪ್ರಾಂತ ಪ್ರಚಾರಕರಾದ ಶ್ರೀಯುತ ನರೇಂದ್ರ ಜೀ, ಪ್ರಾಂತ ಕಾಯ೯ವಾಹ ರಾಘವೇಂದ್ರ ಕಾಗವಾಡ,ಪ್ರಾಂತ ಭೌದ್ದಿಕ ಪ್ರಮುಖರಾದ ಕೃಷ್ಣ ಜೋಶಿ, ವಿಭಾಗದ ಪ್ರಚಾರಕರಾದ ವಿಜಯ್ ಮಹಾಂತೇಶ ಸೇರಿದಂತೆ ಸಂಘದ ಅನೇಕ ಹಿರಿಯ,ಕಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!