ದರ್ಶನ್​ ಜೊತೆ 20 ವರ್ಷದಿಂದ ಇದ್ದೇನೆ, ತುಂಬ ಒಳ್ಳೆಯ ವ್ಯಕ್ತಿ: ನಿರ್ಮಾಪಕ ಶ್ರೀನಿವಾಸ್​

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿ ನಟ ದರ್ಶನ್ ಸಂಕಷ್ಟ ಎದುರಿಸುತ್ತಿದ್ದಾರೆ. ಕನ್ನಡ ಚಿತ್ರರಂಗದ ಹಲವರ ಚರ್ಚೆಗೆ ಗ್ರಾಸವಾಗಿರುವ ಈ ಘಟನೆ ಸದ್ಯ ಭಾರಿ ಚರ್ಚೆಯಾಗುತ್ತಿದೆ. ದರ್ಶನ್ ಅವರ ವ್ಯಕ್ತಿತ್ವದ ಬಗ್ಗೆ ನಿರ್ಮಾಪಕ ಶ್ರೀನಿವಾಸ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಾನು ದರ್ಶನ್ ಜೊತೆ 20 ವರ್ಷಗಳಿಂದ ಪ್ರಯಾಣಿಸುತ್ತಿದ್ದೇನೆ. ಅವರು ತುಂಬಾ ಒಳ್ಳೆಯ ವ್ಯಕ್ತಿ. ನಮ್ಮ ಹಳ್ಳಿಯಲ್ಲಿ ಒಂದು ಮಾತಿದೆ ಸಹವಾಸದಿಂದ ಸನ್ಯಾಸಿ ಕೆಟ್ಟ ಅಂತ. ಹೀಗಾಗಿ ಸುತ್ತಲಿನ ಜನ ದರ್ಶನ್ ಅವರಿಗೆ ಮೋಸ ಮಾಡಿದ್ದಾರೆ. ಅವರು ತುಂಬಾ ಕರುಣಾಳು ಹೃದಯವನ್ನು ಹೊಂದಿದ್ದಾರೆ. ಆಗಾಗ ಅವರ ತೋಟಕ್ಕೆ ಹೋಗಿ ಊಟ ಮಾಡುತ್ತಿದ್ದೆ. ನಾನು ಅವರ ಮನೆಗೆ ಹೋಗಿದ್ದೇನೆ. ಅಂಥವರು ಈ ರೀತಿ ಮಾಡಿದ್ದಾರೆ ಅಂದ್ರೆ ನಂಬಲು ಅಸಾಧ್ಯ ಅವರ ಜೊತೆಗಿರುವವರು ಏನಾದರೂ ಮೋಸ ಮಾಡಿದ್ದಾರೆ ಎಂಬ ಭಾವನೆ ನನ್ನಲ್ಲಿದೆ.

ದರ್ಶನ್​ ತುಂಬ ಒಳ್ಳೆಯವರು. ಅವರು ಹೊರಗೆ ಬಂದೇ ಬರುತ್ತಾರೆ. ಸಹವಾಸದಿಂದ ಈ ರೀತಿ ಆಗಿದೆ. ನಿರ್ಮಾಪಕರು 150 ಕೋಟಿ ರೂಪಾಯಿ ಬಂಡವಾಳ ಹೂಡಿದ್ದಾರೆ. ಅವರಿಗೆಲ್ಲ ಅನ್ಯಾಯ ಆಗಬಾರದು ಕಾನೂನಿನ ಪ್ರಕಾರ ದರ್ಶನ್​ ಅವರನ್ನು ಶೂಟಿಂಗ್​ಗೆ ಕಳಿಸುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ನಿರ್ಮಾಪಕ ಶ್ರೀನಿವಾಸ್​ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!