ವೀರಶೈವ ಮಹಾ ಸಭಾ ಮೊದಲು ಎಲ್ಲರನ್ನೂ ಸಂಘಟಿಸುವ ಕೆಲಸವಾಗಲಿ: ಶ್ರೀಶೈಲ ಸಾರಂಗ ಶ್ರೀ

ಹೊಸದಿಗಂತ ವರದಿ, ಕಲಬುರಗಿ:

ವೀರಶೈವ ಲಿಂಗಾಯತ ಧರ್ಮದಲ್ಲಿ ಅನೇಕ ಒಳಪಂಗಡಗಳಿವೆ. ಹೀಗಾಗಿ ಎಲ್ಲರು ಲಿಂಗಾಯತವೆಂದು ಬರೆಸಬೇಕು ಎಂದು ಶ್ರೀಶೈಲ ಸಾರಂಗ ಮಠದ ಜಗದ್ಗುರು ಶ್ರೀ ಸಾರಂಗಧರ ದೇಶಿಕೇಂದ್ರ ಶ್ರೀಗಳು ಹೇಳಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸಮಾಜದಲ್ಲಿ ಕತ್ತರಿಗಳು ಬಹಳ ಆಗಿವೆ. ಹೀಗಾಗಿ ಹಠಗಾರರು, ಗಾಣಿಗರು, ಪಂಚಮಸಾಲಿಗಳು, ಬಣಜಿಗರು, ಆದಿ ಬಣಜಿಗರು, ಜಂಗಮರು ಈ ರೀತಿ ಹಲವಾರು ಒಳಪಂಗಡಗಳಿವೆ. ಹೀಗಾಗಿ ವೀರಶೈವ ಮಹಾ ಸಭಾ ಮೊದಲು ಎಲ್ಲರನ್ನೂ ಸಂಘಟಿಸಬೇಕಾದ ಕೆಲಸ ಮಾಡಬೇಕಿದೆ ಎಂದರು.

ಸಮಾಜದ ಹಿರಿಯ ಮುಖಂಡರಾದ ಶಾಮನೂರು ಶಿವಶಂಕರಪ್ಪಾ ಅವರು ಮೊದಲು ಸಂಘಟನೆಯ ಕೆಲಸ ಮಾಡಬೇಕು. ಇನ್ನೂ ಜಾತಿ ಗಣತಿಯಲ್ಲಿ ಒಳ ಪಂಗಡಗಳನ್ನು ಬರೆಸಿ ಎಂದು ಜಯಮೃತ್ಯುಂಜಯ ಸ್ವಾಮಿಗಳು ಕರೆ ನೀಡಿರುವುದು ಅವರ ವೈಯಕ್ತಿಕ ಹೇಳಿಕೆಯಾಗಿದೆ ಎಂದು ಹೇಳಿದರು.

ಸದ್ಯಕ್ಕಿರುವ ಜಾತಿ ಗಣತಿ ಇದುವರೆಗೂ ಯಾರೂ ನೋಡಿಲ್ಲ. ಜಾತಿ ಗಣತಿಯ ವರದಿ ಇನ್ನೂ ಮುಖ್ಯಮಂತ್ರಿಯ ಕೈಗೂ ಸೇರಿಲ್ಲ ಎಂದ ಅವರು,
ಮೊದಲು ವರದಿ ಕೊಡಲಿ, ವರದಿ ಬಂದ ತಕ್ಷಣವೇ ಸಿಎಂ ಜಾರಿ ಮಾಡಿ ಬಿಡ್ತಾರಾ ? ವರದಿ ನೋಡಿಕೊಂಡು ಪರ ವಿರೋಧ ನಿರ್ಣಯ ಕೈಗೊಳ್ಳೋಣ ಎಂದು ಶ್ರೀಗಳು ನುಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!