MUST READ | ಪಬ್ಲಿಕ್ ಅಲ್ಲಿ ಈ ರೀತಿ ನಡೆದುಕೊಳ್ಳಿ, ಇದನ್ನೇ ಜನ Common sense ಅನ್ನೋದು!

ಎಷ್ಟೋ ಜನರಿಗೆ ತಾವು ಮಾಡುತ್ತಿರುವ ಕೆಲಸಗಳಿಂದ, ನಡವಳಿಕೆಗಳಿಂದ ಇತರರಿಗೆ ಡಿಸ್ಟರ್ಬ್ ಆಗುತ್ತಿದೆ ಎನ್ನೋ ವಿಷಯವೇ ಅರ್ಥವಾಗೋದಿಲ್ಲ. ಎಲ್ಲವೂ ನಾರ್ಮಲ್ ಎಂದುಕೊಳ್ಳುತ್ತಾರೆ. ಯಾವ ವಿಷಯಗಳು ನೋಡಿ..

  1. ಯಾವುದೇ ಕಾರ್ಯಕ್ರಮ ಅಥವಾ ಸಮಾರಂಭಕ್ಕೆ ಸರಿಯಾದ ಸಮಯಕ್ಕೆ ಹೋಗೋದು, ಆಗದೇ ಇದ್ರೆ ಸಾರಿ ಹೇಳೋದು.
  2. ಬಸ್, ರೈಲು ಅಥವಾ ಇನ್ಯಾವುದೇ ಪಬ್ಲಿಕ್ ಸ್ಥಳದಲ್ಲಿ ನಿಮ್ಮ ಮೊಬೈಲ್‌ನಲ್ಲಿ ಜೋರಾಗಿ ಹಾಡು ಹಾಕೋದು, ರೀಲ್ಸ್ ನೋಡೋದು ಇದು ಇತರರಿಗೆ ಕಿರಿಕಿರಿ ಮಾಡುತ್ತದೆ.
  3. ಹೊಟೇಲ್, ರೆಸ್ಟೋರೆಂಟ್ ಅಥವಾ ಥಿಯೇಟರ್‌ನಲ್ಲಿ ಹೊರಗಿನ ಊಟ ತರುವಂತಿಲ್ಲ ಎಂದರೆ ತೆಗೆದುಕೊಂಡು ಹೋಗಬೇಡಿ. ಊಟ ಚೆಲ್ಲಬೇಡಿ.
  4. ಯಾರಿಗೇ ಮೆಸೇಜ್ ಮಾಡುವ ಮುನ್ನ ಅಥವಾ ಮಾತನಾಸಿರುವ ಮುನ್ನ ಹಾಯ್, ಹೆಲೋ, ಗುಡ್ ಮಾರ್ನಿಂಗ್ ಹೀಗೆ ಶುರು ಮಾಡಿ.
  5. ಯಾರ ಬಳಿಯೇ ಮಾತನಾಡುವಾಗ ಫೋನ್ ನೋಡಿವುದು, ಇನ್ನೆಲ್ಲೋ ಗಮನ ಇಟ್ಟು ಮಾತನಾಡಬೇಡಿ. ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಿ.
  6. ಯಾರೇ ಕರೆ ಮಾಡಿದರೂ, ಮೆಸೇಜ್ ಮಾಡಿದರೂ ಸ್ವೀಕರಿಸಲು ಅಥವಾ ರಿಪ್ಲೇ ಮಾಡಲು ಆಗದೇ ಇದ್ದಾಗ ನಂತರವಾದ್ರೂ ಉತ್ತರಿಸಿ.
  7. ಸಿನಿಮಾ ಥಿಯೇಟರ್‌ಗೆ ಬಂದು ಮೊಬೈಲ್ ನೋಡಬೇಡಿ, ಪಕ್ಕದವರ ಜೊತೆ ಮಾತನಾಡಬೇಡಿ. ಇತರರಿಗೆ ಡಿಸ್ಟರ್ಬ್ ಮಾಡಬೇಡಿ.
  8. ಯಾರಾದರೂ ಕ್ಯೂ ಅಲ್ಲಿ ನಿಂತಿದ್ರೆ ಪಕ್ಕದಿಂದ ಹೋಗೋದು ಹಿಂದಿನಿಂದ ಹೋಗೋದು ಮಾಡಬೇಡಿ. ಇದು ಕಾಮನ್ ಸೆನ್ಸ್ ಅಲ್ಲ.
  9. ಬಾಯಿ ಬಿಟ್ಟು ಅಗಿಯಬೇಡಿ, ಇದು ಇತರರಿಗೆ ಇರಿಸುಮುರಿಸು ಮಾಡುತ್ತದೆ. ಗಲೀಜು ಎನಿಸುತ್ತದೆ.
  10. ಇತರರ ಯಾವುದೇ ವಸ್ತು ಮುಟ್ಟುವ ಮುನ್ನ, ವಿಷಯಗಳ ಬಗ್ಗೆ ಮಾತನಾಡುವ ಮುನ್ನ ಅವರ ಪರ್ಮಿಷನ್ ತೆಗೆದುಕೊಳ್ಳಿ.
  11. ಶಾಪಿಂಗ್ ಮಾಡುವಾಗ ಬಟ್ಟೆಗಳನ್ನು ಎಲ್ಲೆಂದರಲ್ಲಿ ಎಸೆಯಬೇಡಿ, ಎಲ್ಲಿಂದ ತಂದಿದ್ದಿರೋ ಅಲ್ಲಿಯೇ ಇಟ್ಟುಬನ್ನಿ.
  12. ಸರಿಯಾಗಿ ಮಾತನಾಡುವುದು, ಸೂಕ್ತವಾಗಿ ನಡೆದುಕೊಳ್ಳುವುದು, ರೂಡ್ ಪ್ರಶ್ನೆಗಳನ್ನು ಮಾಡುವುದು ತಪ್ಪು.
  13. ಬೇರೆಯವರ ಕಡೆ ಕೈ ತೋರಿಸಿ ಮಾತನಾಡುವ ಅಭ್ಯಾಸ ಇದ್ದರೆ ಇಂದೇ ಬಿಟ್ಟುಬಿಡಿ.
  14. ಎಲ್ಲೆಂದರಲ್ಲಿ ಕಸ ಎಸೆಯಬೇಡಿ, ಬುಟ್ಟಿ ಕಾಣಿಸದಿದ್ದರೆ ನಿಮ್ಮ ಬ್ಯಾಗ್‌ನ ಸೈಡ್ ಪಾಕೆಟ್‌ನಲ್ಲಿ ಕವರ್ ಇಟ್ಟುಕೊಂಡು ಡಸ್ಟ್‌ಬಿನ್ ಸಿಕ್ಕಾಗ ಹಾಕಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!