ಪ್ರವಾದಿಯನ್ನು ನಿಂದಿಸುವವರ ಶಿರಚ್ಛೇದ ಮಾಡಿ: ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ವಿಡಿಯೋ ವೈರಲ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸಾಮಾಜಿಕ ಮಾಧ್ಯಮದಲ್ಲಿ ವಿವಾದಾತ್ಮಕ ಹೇಳಿಕೆಯ ವಿಡಿಯೋ ಯೊಂದು ವೈರಲ್ ಆಗುತ್ತಿದ್ದು, ಅದ್ರಲ್ಲಿ ‘ಪ್ರವಾದಿಯನ್ನು ನಿಂದಿಸುವವರ ಶಿರಚ್ಛೇದ ಮಾಡಿ’ ಎಂದು ಸೈಯದ್ ಅಲಿ ಅಕ್ಬರ್ ಜಾಗೀರದಾರ್ ಎಂಬಾತ ಹೇಳಿಕೊಂಡಿದ್ದಾರೆ.

ಜಾಗೀರದಾರ್ ಎಂಬ ಇನ್‌ಸ್ಟಾಗ್ರಾಮ್ ಇನ್​ಫ್ಲೂಯೆನ್ಸರ್​​​ (Instagram Influencer) ನೀಡಿರುವ ವಿವಾದಾತ್ಮಕ ಹೇಳಿಕೆ ವೈರಲ್ ಆಗುತ್ತಿದ್ದು, ಆತನ ವಿರುದ್ಧ ಕ್ರಮಕ್ಕೆ ಜನರು ಒತ್ತಾಯಿಸುತ್ತಿದ್ದಾರೆ.

ಸೈಯದ್ ಕರ್ನಾಟಕದವ ಎನ್ನಲಾಗಿದೆ. ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಪೊಲೀಸರನ್ನು ಟ್ವಿಟರ್ ಬಳಕೆದಾರರು ಆಗ್ರಹಿಸಿದ್ದಾರೆ.

ಆತ ವಿಡಿಯೋ ದಲ್ಲಿ ‘ಪ್ರವಾದಿಯನ್ನು ನಿಂದಿಸುವವರ ಶಿರಚ್ಛೇದ ಮಾಡಿ’ ಎಂದು ಹೇಳಿದ್ದಾನೆ. ಮತ್ತೊಂದು ವೀಡಿಯೊದಲ್ಲಿ, ‘ಕುರಾನ್ ಪ್ರಕಾರ ಕಾಫಿರರಿಗೆ ಇರುವ ಏಕೈಕ ಸ್ಥಳವೆಂದರೆ ನರಕ’ ಎಂದು ಹೇಳಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!