ಚುನಾವಣೆ ಬರುತ್ತಿದ್ದಂತೆ ‘ಹಿಂದು’ ಜಪ: ಭಾರತ ಈಗಾಗಲೇ ಹಿಂದು ರಾಷ್ಟ್ರ ಎಂದ ಕಾಂಗ್ರೆಸ್ ನಾಯಕ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಧ್ಯಪ್ರದೇಶ ವಿಧಾನ ಸಭೆ ಚುನಾವಣೆಗೆ ಈಗಾಗಲೇ ಕಾಂಗ್ರೆಸ್ ರಣತಂತ್ರ ರೂಪಿಸುತ್ತಿದ್ದು, ಬಿಜೆಪಿಯನ್ನು ಸೋಲಿಸಿ ಅಧಿಕಾರಕ್ಕೇರಲು ದೊಡ್ಡ ಪ್ಲಾನ್ ಮಾಡಿದೆ.

ಇದಕ್ಕಾಗಿ ಕಾಂಗ್ರೆಸ್ ತನ್ನ ವರಸೆಯನ್ನೇ ಬದಲಿಸಿದೆ. ಶೇಕಡಾ 82 ರಷ್ಟು ಹಿಂದುಗಳಿರುವ ಭಾರತ ಅಂಕಿ ಅಂಶಗಳ ಪ್ರಕಾರ ಈಗಾಗಲೇ ಹಿಂದು ರಾಷ್ಟ್ರವಾಗಿದೆ ಎಂದು ಮಧ್ಯ ಪ್ರದೇಶ ಮಾಜಿ ಸಿಎಂ, ಕಾಂಗ್ರೆಸ್ ಅಧ್ಯಕ್ಷ ಕಮಲನಾಥ್ ಹೇಳಿದ್ದಾರೆ.

ಭಾಗೇಶ್ವರಧಾಮದ ಗುರೂಜಿ ಧೀರೇಂದ್ರ ಶಾಸ್ತ್ರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕಮಲ್ ನಾಥ್, ಈ ಹೇಳಿಕೆ ಚುನಾವಣೆ ದೃಷ್ಟಿಯಿಂದ ವೋಟ್ ಬ್ಯಾಂಕ್ ಗಾಗಿ ಕಾಂಗ್ರೆಸ್ ಇದೀಗ ತನ್ನ ನಿಲುವನ್ನೇ ಬದಲಿಸಿದ್ದಾರೆ.

ಆರ್‌ಜೆಡಿ ನಾಯಕರು ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಬೆನ್ನಲ್ಲೇ ಇದೀಗ ಕಮಲ್ ನಾಥ್ ಈ ಹೇಳಿಕೆ ನೀಡಿದ್ದಾರೆ. ಕಮಲ್ ನಾಥ್ ಪುತ್ರ ನಕುಲ್ ಕಮಲ್ ನಾಥ್, ಧಿರೇಂದ್ರ ಶಾಸ್ತ್ರಿಯನ್ನು ಚಿಂದ್‌ವಾರಾ ಕಾರ್ಯಕ್ರಮದಲ್ಲಿ ಅದ್ಧೂರಿಯಾಗಿ ಸ್ವಾಗತಿಸಿದ್ದರು. ಇದು ಆರ್‌ಜೆಡಿ ನಾಯಕರನ್ನು ಕೆರಳಿಸಿತ್ತು.

ಆದರೆ ಇದೀಗ ಕಮಲ್ ನಾಥ್ ಹಾಗೂ ನಕಲು ಕಮಲ್ ನಾಥ್ ಧಿರೇಂದ್ರ ಶಾಸ್ತ್ರಿ ಕಾರ್ಯಕ್ರಮದಲ್ಲಿ ಹಿಂದುತ್ವ ಪ್ರತಿಪಾದಿಸುತ್ತಿದ್ದಾರೆ. ಇದು ನಿಮ್ಮ ನಿಲುವಿಗೆ ವಿರುದ್ಧವಾಗಿದೆ ಎಂದು ಆರ್‌ಜೆಡಿ ನಾಯಕ ತಿವಾರಿ ಹೇಳಿದ್ದಾರೆ.

ಕಮಲ್ ನಾಥ್ ಹಿಂದುತ್ವ ಹೇಳಿಕೆ ಇದೀಗ ಕಾಂಗ್ರೆಸ್ ನಿಲುವನ್ನೇ ಪ್ರಶ್ನಿಸುತ್ತಿದೆ. ಆದರೆ ಹಿಂದುತ್ವ ಮತ ಕ್ರೋಢಿಕರೀಸಲು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಬಾರಿ ಕಸರತ್ತು ನಡೆಸುತ್ತಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!