ಬಿಡದೆ ಸುರಿವ ಜಡಿಮಳೆಯ ಬೆನ್ನಿಗೇ  ಕೇರಳದ ಎಲ್ಲೆಡೆ ಕಾಡಿದೆ ಸಾಂಕ್ರಾಮಿಕ ರೋಗ ಭೀತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳದಲ್ಲಿ ಮಳೆಯ ತೀವ್ರತೆಯ ನಡುವೆಯೇ ಈಗ ಎಲ್ಲೆಡೆ ಸಾಂಕ್ರಾಮಿಕ ರೋಗ ಭೀತಿ ಆರಂಭವಾಗಿದೆ.
ಈ ಬಗ್ಗೆ ನಾಗರಿಕರಿಗೆ ಎಚ್ಚರಿಕೆ ನೀಡಿರುವ ಆರೋಗ್ಯ ಸಚಿವೆ ವೀಣಾ ಜಾರ್ಜ್, ನೀರಿನಿಂದ,  ಪ್ರಾಣಿಗಳಿಂದ, ಗಾಳಿಯಿಂದ, ಕೀಟಗಳಿಂದ ಹರಡುವ ರೋಗಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಲು ಸೂಚಿಸಿದ್ದಾರೆ.
ರಾಜ್ಯ ಕೋವಿಡ್‌ನಿಂದ ಸಂಪೂರ್ಣವಾಗಿ ಮುಕ್ತವಾಗಿಲ್ಲ. ಇದಲ್ಲದೆ ಕೋವಿಡ್, ಎಚ್೧ಎನ್೧, ವೈರಲ್ ಜ್ವರ ಮತ್ತು ಚಿಕನ್ ಗುನ್ಯಾ ರೀತಿಯ ಗಾಳಿಯಿಂದ ಹರಡುವ ರೋಗಗಳೂ ಹೆಚ್ಚಳವಾಗುವ ಸಾಧ್ಯತೆ ಇದೆ. ಹೀಗಾಗಿ ಜನತೆ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು, ಕೈಗಳನ್ನು ಸಾಬೂನು,  ನೀರಿನಿಂದ ಸ್ವಚ್ಛಗೊಳಿಸಬೇಕು ಎಂದಿರುವ ಅವರು, ಸಂತ್ರಸ್ತರ ಶಿಬಿರಗಳ ಪಕ್ಕದಲ್ಲಿರುವ ಆಸ್ಪತ್ರೆಗಳ ಆರೋಗ್ಯ ಕಾರ್ಯಕರ್ತರು ಆಗಾಗ ಶಿಬಿರಗಳಿಗೆ ಭೇಟಿ ನೀಡಬೇಕು ಎಂದು ಸೂಚಿಸಿದ್ದಾರೆ.
ಇನ್ನು ಸ್ವಯಂಸೇವಕರು, ಕಲುಷಿತ ಮಣ್ಣು ನೀರಿನ ಸಂಪರ್ಕಕ್ಕೆ ಬರುವವರು ರೇಬಿಸ್ ನಿರೋಧಕ  ಡಾಕ್ಸಿಸೈಕ್ಲಿನ್ ತೆಗೆದುಕೊಳ್ಳಬೇಕು. ಡೆಂಗ್ಯೂ ಜ್ವರ, ಮಲೇರಿಯಾ, ಚಿಕನ್ ಗುನ್ಯಾ, ವೆಸ್ಟ್ ನೈಲ್, ಜಪಾನೀಸ್ ಜ್ವರ ಮುಂತಾದ ಸೊಳ್ಳೆಗಳಿಂದ ಹರಡುವ ರೋಗಗಳಿಂದ ರಕ್ಷಿಸಲು, ಮನೆ, ಸುತ್ತಮುತ್ತಲಿನ ಮತ್ತು ಶಿಬಿರಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗದಂತೆ ವಿಶೇಷ ಕಾಳಜಿ ವಹಿಸಬೇಕು ಎಂದೂ ಅವರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!