ಕಲಬುರಗಿ ಗ್ರಾಮೀಣ ಮೀಸಲು ಕ್ಷೇತ್ರದಿಂದ ಬೆಳಮಗಿ ನಾಮಪತ್ರ ಸಲ್ಲಿಕೆ

ಹೊಸದಿಗಂತ ವರದಿ ಕಲಬುರಗಿ:

ಕಲಬುರಗಿ ಗ್ರಾಮೀಣ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ರೇವೂನಾಯಕ್ ಬೆಳಮಗಿ ಮಂಗಳವಾರ ತಮ್ಮ ಉಮೇದುವಾರಿಕೆಯ ನಾಮಪತ್ರವನ್ನು ಸಹಾಯಕ ಆಯುಕ್ತರ ಕಚೇರಿಯಲ್ಲಿ ಚುನಾವಣಾಧಿಕಾರಿಗೆ ಸಲ್ಲಿಸಿದರು.

ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ನನ್ನ ಕೊನೆಯ ಚುನಾವಣೆ. ಹೀಗಾಗಿ ಕ್ಷೇತ್ರದ ಎಲ್ಲ ಸಮಾಜದ ಮುಖಂಡರಿಗೆ,ಕಾಯ೯ಕತ೯ರಿಗೆ,ಮಹಿಳೆಯರು ಹಾಗೂ ಯುವಕರಿಗೆ ಆಶೀರ್ವಾದ ಮಾಡಬೇಕೆಂದು ವಿನಂತಿ ಮಾಡಿದರು.

ಸ್ಥಳೀಯ ಶಾಸಕರು ಕ್ಷೇತ್ರದ ಸಮಸ್ಯೆಗಳಿಗೆ ಸರಿಯಾಗಿ ಸ್ಪಂಧಿಸಲಿಲ್ಲ.ಯಾವುದೇ ಕಾಮಗಾರಿಗಳ ಬಿಲ್,ಗಳನ್ನು ಪಾಸ್ ಮಾಡದೇ ವಿನಾಮೇಶ ಎಣಸಿದ್ದು,ಇದೆಲ್ಲವೂ ಕ್ಷೇತ್ರದ ಅಭಿವೃದ್ಧಿ ಗೆ ಹೊಡೆತ ಬಿದ್ದಿದೆ ಎಂದರು.

ಕಾಂಗ್ರೆಸ್ ಪಕ್ಷದ ನಾಯಕರಿಗೆ ಕ್ಷೇತ್ರದಲ್ಲಿ ನಡೆಯುತ್ತಿರುವ ಎಲ್ಲಾ ಸಂಗತಿಗಳನ್ನು ತಿಳಿಸಿದ್ದೇನೆ.ಎಲ್ಲಾ ಮುಖಂಡರನ್ನು ಗಣನೆಗೆ ತೆಗೆದುಕೊಂಡು ಹೋಗಲು ಪ್ರಯತ್ನ ಮಾಡಿದರು,ನನ್ನ ಕೈಗೆ ಯಾರು ಸಿಗಲಿಲ್ಲ ಎಂದು ಹೇಳಿದರು.

ಕೊನೆಯದಾಗಿ ನಾನು ಹೇಳುವುದೆನೆಂದರೆ,ಯಾರಿಗೆ ಆಗಲಿ,ಆಶೆ ಒಳ್ಳೆಯದಾಗಿರಬೇಕೆ ವಿನಃ ದುರಾಸೆ ಇರಬಾರದು ಎಂದು ಬಂಡಾಯ ಏಳುವ ನಾಯಕರಿಗೆ ಟಾಂಗ್ ನೀಡಿದರು. ಇನ್ನೂ ಸಹ ನಾನು ಎಲ್ಲರ ಮನವೊಲಿಸಿ ನನ್ನ ಜೊತೆಗೆ ತೆಗೆದುಕೊಂಡು ಹೋಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!