August 29, 2026
Saturday, August 29, 2026
spot_img

ಬೆಳಗಾವಿ | ಗಂಡನ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಪತ್ನಿ

ಹೊಸದಿಗಂತ ವರದಿ, ಬೆಳಗಾವಿ:

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಶಂಕರಮಠ ಗಲ್ಲಿಯಲ್ಲಿನ ವಿವಾಹಿತೆಯು, ಗಂಡನ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಸಂಗೀತಾ ಗಾಡಿವಡ್ಡರ (35) ಮೃತ ಗೃಹಿಣಿ. ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕಳೆದ 15 ವರ್ಷಗಳ ಹಿಂದೆ ವೆಂಕಟೇಶ್ ಗಾಡಿವಡ್ಡರ್ ಜೊತೆ ಮೃತ ಸಂಗೀತಾ ವಿವಾಹವಾಗಿದ್ದರು. ಕಳೆದ ಕೆಲ ವರ್ಷಗಳಿಂದ ಗಂಡ ಹಾಗೂ ಹೆಂಡತಿ ನಡುವೆ ಜಗಳವಾಗುತ್ತಿತ್ತು. ಆದರೆ ನಿನ್ನೆ ಬುಧವಾರ ಏ.29 ರಂದು ರಾತ್ರಿ ಗಂಡನ ಕಿರುಕುಳ ತಾಳಲಾರದೆ ಮಹಿಳೆ ಆತ್ಮಹತ್ಯೆಗೆ ಮಾಡಿಕೊಂಡಿದ್ದಾಳೆ.

ಸಂಗೀತಾ ಮನೆಯವರು ವರದಕ್ಷಿಣೆ ಕಿರುಕುಳದ ಆರೋಪ ಮಾಡಿದ್ದು, ಮನೆ ಕಟ್ಟಿಕೊಳ್ಳಲು 2 ಲಕ್ಷ ರೂ. ಕೊಡುವಂತೆ ತವರು ಮನೆಯವರಿಗೆ ಕೇಳು ಎಂದು ವೆಂಕಟೇಶ್ ಸಂಗೀತಾಗೆ ಹೇಳಿದ್ದ. ಆದರೆ ಹಣ ನೀಡದಿದ್ದಕ್ಕೆ ಮಗಳಿಗೆ ಹೊಡೆದು, ಬಳಿಕ ನೇಣು ಹಾಕಿದ್ದಾರೆಂದು ಮೃತಳ ತಾಯಿ ಆರೋಪಿಸಿದ್ದಾರೆ. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !