ಬೆಳಗಾವಿ ಅಮಾನವೀಯ ಪ್ರಕರಣ: ಸಂತ್ರಸ್ತೆಯ ಫೋಟೊ, ಸಂದರ್ಶನ ಪ್ರಸಾರ ಮಾಡುವಂತಿಲ್ಲ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಳಗಾವಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಮರಕ್ಕೆ ಕಟ್ಟಿ ಹಾಕಿ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಿದರ್ಶನವೊಂದನ್ನು ನೀಡಿದೆ.

ಮಹಿಳೆ ಬೆತ್ತಲಾಗಿಸಿ ಮರಕ್ಕೆ ಕಟ್ಟಿ ಥಳಿಸಿದ ಘಟನೆಯ ವಿಡಿಯೋ ಹಾಗೂ ಫೋಟೊಗಳು ಸಾಆಜಿಕ ಜಾಲತಾಣದಲ್ಲಿ ಹಾಗೂ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಈ ಬಗ್ಗೆ ಕೋರ್ಟ್ ಕಳವಳ ವ್ಯಕ್ತಪಡಿಸಿದೆ.

ಸಂತ್ರಸ್ತೆಯ ಬ್ಲರ್ ಇಮೇಜ್ ಅಥವಾ ವಿಡಿಯೋಗಳನ್ನು ಕೂಡ ಯಾವ ಮಾಧ್ಯಮವೂ ಬಳಸುವಂತಿಲ್ಲ ಎಂದು ಮಾಧ್ಯಮಗಳಿಗೆ ಹೈ ಕೋರ್ಟ್ ನಿರ್ದೇಶನ ನೀಡಿದೆ.

ಸಂತ್ರಸ್ತೆಯ ಕುರಿತ ಸುದ್ದಿಗಳ ಶೀರ್ಷಿಕೆ, ವಿಷಯಗಳು, ಫೋಟೊ, ವಿಡಿಯೋ ಇಡೀ ಮಾನವ ಸಂಕುಲಕ್ಕೇ ಆಘಾತವನ್ನುಂಟುಮಾಡುವಂತಿದೆ. ಒಂದು ಕಡೆ ಎಷ್ಟೆಲ್ಲಾ ಮುಂದುವರಿದಿದ್ದೀವಿ ಎಂದು ಹೆಮ್ಮೆ ಪಡುವಾಗ ಇನ್ನೊಂದು ಕಡೆ ಇಂಥ ನೀಚ ಘಟನೆಗಳು ನಡೆಯುತ್ತವೆ ಎಂದು ಪೀಠ ಹೇಳಿದೆ.

ಬೆಳಗಾವಿಯಲ್ಲಿ ಎರಡು ಹಳ್ಳಿಗಳ ಯುವಕ, ಯುವತಿ ಪ್ರೀತಿಸಿ ಓಡಿ ಹೋಗಿದ್ದಾರೆ. ಯುವತಿಯ ಮನೆಯವರು ಯುವಕನ ಮನೆಗೆ ನುಗ್ಗಿ ಆತನ ತಾಯಿಯನ್ನು ಮನೆಯಿಂದ ಹೊರತಂದು ಬಟ್ಟೆ ಬಿಚ್ಚಿಸಿ ಮೆರವಣಿಗೆ ಮಾಡಿ ನಂತರ ಮರಕ್ಕೆ ಕಟ್ಟಿ ಹೊಡೆದಿದ್ದರು. ಈ ಪ್ರಕರಣ ದೇಶಾದ್ಯಂತ ಚರ್ಚೆಯಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!