Thursday, February 2, 2023

Latest Posts

ಬೆಳಗಾವಿಯ ಗುಂಡಿನ ದಾಳಿಗೆ ಹಳೇ ವೈಷಮ್ಯವೇ ಕಾರಣ: ಪ್ರಾಥಮಿಕ ತನಿಖೆಯಿಂದ ಮಾಹಿತಿ

ಹೊಸದಿಗಂತ ವರದಿ, ಬೆಳಗಾವಿ:

ಶ್ರೀ ರಾಮಸೇನೆಯ ಬೆಳಗಾವಿ ಜಿಲ್ಲಾಧ್ಯಕ್ಷ ರವಿ ಕೋಕಿತ್ಕರ್ ಮೇಲೆ ನಡೆದಿದ್ದ ಗುಂಡಿನ ದಾಳಿ ಪ್ರಕರಣವನ್ನು ಬೆಳಗಾವಿ ನಗರ ಪೊಲೀಸರು 18 ಗಂಟೆಗಳೊಗೆ ಬೇದಿಸಿ ಮೂವರನ್ನು ಬಂಧಿಸಿದ್ದಾರೆ.

ಗುಂಡಿನ ದಾಳಿಗೆ ಹಣಕಾಸಿನ ವ್ಯವಹಾರ ಹಾಗೂ ಹಳೇ ವೈಷಮ್ಯವೇ ಕಾರಣ ಎಂಬುದನ್ನು ಪ್ರಾಥಮಿಕ ತನಿಖೆಯಿಂದ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಬೆಳಗಾವಿ ಮಹಾನಗರದ ಪಾಟೀಲ ಮಾಳದ ಅಭಿಜಿತ್ ಸೋಮನಾಥ ಭಾತಕಾಂಡೆ(41), ಬೆಳಗಾವಿ ತಾಲೂಕಿನ ಬಸ್ತವಾಡ ಗ್ರಾಮದ ಸಂಭಾಜಿ ಗಲ್ಲಿಯ ರಾಹುಲ ಕೊಡಚವಾಡ(32) ಹಾಗೂ ಜ್ಯೋತಿಬಾ ಗಂಗಾರಾಮ್ ಮುತಗೇಕರ್(25) ಬಂಧಿತ ಆರೋಪಿಗಳು. ಬಂಧಿತರನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!