ಬಳ್ಳಾರಿ ಜಿಲ್ಲಾ ನೂತನ ಜಿಲ್ಲಾ ಪದಾಧಿಕಾರಿಗಳ ಸಭೆ

ಹೊಸದಿಗಂತ ವರದಿ, ಬಳ್ಳಾರಿ: :

ಕೇಂದ್ರ ಹಾಗೂ ರಾಜ್ಯ ಸರ್ಕಾರ ಎಲ್ಲ ವರ್ಗದವರಿಗೂ ಅನುಕೂಲವಾಗುವ ನಾನಾ ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದು, ಕಾರ್ಯಕರ್ತರು ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಮನೆ ಮನೆಗೆ ತಲುಪಿಸಲು ಮುಂದಾಗಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ್ ಅವರು ಹೇಳಿದರು.
ನಗರದ ಬಿಜೆಪಿ ಜಿಲ್ಲಾ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ನೂತನ ಜಿಲ್ಲಾ ಪದಾಧಿಕಾರಿಗಳ ಸಭೆಗೆ ಚಾಲನೆ ನೀಡಿ ‌ಮಾತನಾಡಿದರು. ಮಹಿಳೆಯರಿಗೆ, ವೃದ್ಧರಿಗೆ, ಮಕ್ಕಳಿಗೆ, ನಿರುದ್ಯೋಗ ಯುವಕರಿಗೆ, ವಿಶಿಷ್ಟಚೇತನರಿಗೆ, ದೇಶದಕ್ಕೆ ಅನ್ನ ನೀಡುವ ರೈತರಿಗೆ ಹಾಗೂ ಅವರ‌ ಮಕ್ಕಳಿಗೆ ನಮ್ಮ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿ ಇತರರಿಗೆ‌ ಮಾದರಿಯಾಗಿದೆ. ಕಾರ್ಯಕರ್ತರು ಸರ್ಕಾರದ ಸಾಧನೆಗಳನ್ನು ಮನೆ‌ಮನೆಗೆ ತಲುಪಿಸಿ ಪಕ್ಷವನ್ನು ‌ಮತ್ತಷ್ಟು ತಳಮಟ್ಟದಿಂದ ಗಟ್ಟಿಗೊಳಿಸಲು ಮುಂದಾಗಬೇಕು, ಕಾರ್ಯಕರ್ತರೇ ಪಕ್ಷದ ಜೀವಾಳ, ಮುಂಬರುವ ಚುನಾವಣೆಯನ್ನು ಮುಂದಿಟ್ಟುಕೊಂಡು ಈಗಿನಿಂದಲೇ ಕಾರ್ಯಕರ್ತರು ಸನದನದ್ಧರಾಗಬೇಕು ಎಂದು ಕರೆ‌ ನೀಡಿದರು. ಬಳ್ಳಾರಿ‌ ವಿಭಾಗ್ ಪ್ರಭಾರಿ ಸಚ್ಚಿದಾನಂದ‌ ಮೂರ್ತಿ, ಬಳ್ಳಾರಿ ವಿಭಾಗ್ ಪ್ರಭಾರಿ ಸಿದ್ದೇಶ್ ಯಾದವ್, ವಿಭಾಗೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಪಿ.ಪೂಜೆಪ್ಪ, ಶಾಸಕರಾದ ಎಂ.ಎಸ್.ಸೋಮಲಿಂಗಪ್ಪ, ಗಾಲಿ ಸೋಮಶೇಖರ್ ರೆಡ್ಡಿ, ನೂತನ ಜಿಲ್ಲಾಧ್ಯಕ್ಷರಾದ ಗೋನಾಳ್‌ ಮುರಹರಗೌಡ, ಚೆನ್ನಬಸವನಗೌಡ ಪಾಟೀಲ್, ಎಮ್ಮೆಲ್ಸಿ ವೈ.ಎಂ.ಸತೀಶ್ ಅವರು‌ ಮಾತನಾಡಿದರು. ಈ ಸಂದರ್ಭದಲ್ಲಿ ನೂತನ ಎಮ್ಮೆಲ್ಸಿ ವೈ.ಎಂ.ಸತೀಶ್, ನೂತನ ವಿಜಯನಗರ ಜಿಲ್ಲಾಧ್ಯಕ್ಷ ಚೆನ್ನಬಸವನಗೌಡ ಪಾಟೀಲ್, ಬಳ್ಳಾರಿ ನೂತನ ಜಿಲ್ಲಾಧ್ಯಕ್ಷ ಗೋನಾಳ್ ಮುರಹರಗೌಡ ಅವರನ್ನು ಗಣ್ಯರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.
ಗುರುಲಿಂಗನಗೌಡ, ಬೂಡಾ ಮಾಜಿ ಅಧ್ಯಕ್ಷ
ಕೆ.ಎ. ರಾಮಲಿಂಗಪ್ಪ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ
ವಿರುಪಾಕ್ಷಗೌಡ, ಜಿಲ್ಲಾ ಪ್ರದಾನ ಕಾರ್ಯದರ್ಶಿ
ಅನಿಲ್ ಕುಮಾರ್ ಮೋಕ, ಪ್ರದಾನ ಕಾರ್ಯದರ್ಶ ಅಶೋಕ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಶಿವ ಶಂಕರ ರೆಡ್ಡಿ, ಬಳ್ಳಾರಿ ‌ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕಾರ್ಕಲತೋಟ
ಪಿ ಪಾಲಣ್ಣ, ಜಿಲ್ಲಾ ವಕ್ತಾರರಾದ ಡಾ.ಬಿ.ಕೆ.ಸುಂದರ್, ಮಾದ್ಯಮ ಪ್ರಮುಖ ಕೃಷ್ಣಾ ರೆಡ್ಡಿ, ಜಿಲ್ಲಾ ಮದ್ಯಮ ಸಹ ಪ್ರಮುಖ ರಾಜೀವ್ ತೊಗರಿ ಸೇರಿದಂತೆ ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಎಲ್ಲ ಮೋರ್ಚಾ ಅದ್ಯಕ್ಷರು, ಪದಾಧಿಕಾರಿಗಳು,
ಮಂಡಲ ಅದ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!