16 ವರ್ಷಗಳ ಬಳಿಕ ಬಳ್ಳಾರಿ ಉಸ್ತುವಾರಿ ದೊರೆತಿದೆ: ಸಚಿವ ಶ್ರೀರಾಮುಲು

ಹೊಸದಿಗಂತ ವರದಿ, ಬಳ್ಳಾರಿ:

ತವರು ಜಿಲ್ಲೆ, ರಾಜಕೀಯ ಜನ್ಮ ನೀಡಿದ ಜಿಲ್ಲಾ ಉಸ್ತುವಾರಿ ಕಳೆದ 16 ವರ್ಷಗಳ ಹಿಂದೆ ಅದೂ ಕೆಲ ತಿಂಗಳು ಮಾತ್ರ ಅವಕಾಶ ಸಿಕ್ಕಿತ್ತು, ನಂತರ ನಾನಾ ಕಾರಣಗಳಿಂದ ಸಿಕ್ಕಿರಲಿಲ್ಲ, ಈಗ ಮತ್ತೆ ಅವಕಾಶ ಒದಗಿ ಬಂದಿದೆ ಎಂದು ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಹೇಳಿದರು.
ಜಿಲ್ಲಾ ಉಸ್ತುವಾರಿಯಾಗಿ ನೇಮಕಗೊಂಡ ಬಳಿಕ ನಗರದ ಅಧಿದೇವಗೆ ಶ್ರೀ ಕನಕ ದುರ್ಗಮ್ಮ ದೇಗುಲಕ್ಕೆ ಭೇಟಿ‌ ನೀಡಿ ದೇವಿ ದರ್ಶನ ಪಡೆದ ಬಳಿಕ ಮಂಗಳವಾರ ಸಂಜೆ ಮಾತನಾಡಿದರು. 16 ವರ್ಷಗಳ ಬಳಿಕ ದೇವರ ಆರ್ಶಿವಾದ, ಪಕ್ಷ, ಮುಖ್ಯಮಂತ್ರಿ, ರಾಜ್ಯ ಹಾಗೂ ರಾಷ್ಟ್ರೀಯ ಅಧ್ಯಕ್ಷರು ಪುನಃ ತವರು ಜಿಲ್ಲೆಯ ಉಸ್ತುವಾರಿಯಾಗಿ ಕೆಲಸ ಮಾಡಲು ಅವಕಾಶ ಕಲ್ಪಿಸಿದ್ದಾರೆ, ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುವೆ ಎಂದರು. ಗದಗ, ರಾಯಚೂರು, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಯಾಗಿ ಕೆಲಸ ಮಾಡಿರುವೆ, ಚಾಮರಾಜ ನಗರ, ಯಾದಗಿರಿ ಸೇರಿದಂತೆ ಎಲ್ಲ‌ ಕಡೆಗಳಲ್ಲೂ ಹೆಜ್ಜೆ ಇರುವ ಹಾಗೆ ಅಭಿವೃದ್ಧಿ ಕೆಲಸಗಳನ್ನು ‌ಮಾಡಿರುವೆ, 16 ವರ್ಷಗಳ ಬಳಿಕ ಈ ಅವಕಾಶ ಒದಗಿ ಬಂದಿದೆ, ಅವಧಿಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವೆ, ರೈತರು, ಕೃಷಿಕರು, ಮಹಿಳೆಯರು, ಮಕ್ಕಳಿಗೆ, ವಿದ್ಯಾವಂತ ಯುವಕರು ಸೇರಿದಂತೆ ಎಲ್ಲ ವರ್ಗದರಿಗೂ ನ್ಯಾಯ ಕಲ್ಪಿಸುವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಾಜಿ ಸಂಸದರಾದ ಸಣ್ಣ ಫಕೀರಪ್ಪ, ಜೆ.ಶಾಂತಾ, ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ, ಬೂಡಾ ಅಧ್ಯಕ್ಷ ಕಾರ್ಕಲತೋಟ ‌ಪಾಲನ್ನ, ಮಾಜಿ ಶಾಸಕ ಟಿ.ಎಚ್.ಸುರೇಶ ಬಾಬು, ಮುಖಂಡರಾದ ತಿಮ್ಮಪ್ಪ, ರಾಮಾಂಜಿನಿ ಸೇರಿದಂತೆ ಇತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!