ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನ ಇಂದಿರಾನಗರದ ಅಪಾರ್ಟ್‌ಮೆಂಟ್‌ನಲ್ಲಿ ಅಸ್ಸಾಂ ಮೂಲದ ಯುವತಿ ಮಾಯಾ ಗೊಗಾಯ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಸಂಬಂಧ ತಲೆಮರೆಸಿಕೊಂಡಿದ್ದ ಆರೋಪಿ ಆರವ್ ಹನೋಯ್ನನ್ನು ಬೆಂಗಳೂರು ಪೊಲೀಸರು ಉತ್ತರ ಭಾರತದಲ್ಲಿ ಬಂಧಿಸಿದ್ದಾರೆ.
ಅಸ್ಸಾಂ ಚೆಲುವೆಯನ್ನು ಪ್ರೀತಿಸಿದ ಆರವ್ ಹನೋಯ್ ಬೆಂಗಳೂರಿನ ಇಂದಿರಾನಗರದ ಅಪಾರ್ಟ್‌ಮೆಂಟ್‌ನಲ್ಲಿ ಚಾಕುವಿನಿಂದ ಇರಿದು ಹತ್ಯೆ ಮಾಡಿ ಎಸ್ಕೇಪ್ ಆಗಿದ್ದ. ನವೆಂಬರ್ 27 ರಂದು ಈ ಒಂದು ಘಟನೆ ನಡೆದಿತ್ತು. ಒಂದು ದಿನದ ಹಿಂದಷ್ಟೇ ಒಟ್ಟಿಗೆ ಕಾಣಿಸಿಕೊಂಡಿದ್ದ ಪ್ರೇಮಿಗಳ ಮಧ್ಯೆ ಅದೇನಾಗಿತ್ತೋ ಅಪಾರ್ಟ್ಮೆಂಟ್ ಒಳಗೆ ಇಬ್ಬರು ಜೊತೆಗೆ ಹೋಗಿದ್ದರು. ವಾಪಸ್ ಆರವ್ ಒಬ್ಬನೇ ಆಚೆ ಬಂದ ಸಿಸಿಟಿವಿ ದೃಶ್ಯಾವಳಿಗಳು ಸಿಕ್ಕಿದ್ದವು ಅಪಾರ್ಟ್ಮೆಂಟ್ನಿಂದ ವಾಸನೆ ಬಂದ ಮೇಲೆ ಕೋಣೆಯ ಬಾಗಿಲು ತೆಗೆದು ನೋಡಿದಾಗ ಮಾಯಾ ಗೊಗಾಯ್ ಕೊಲೆಯಾಗಿದ್ದು ಬೆಳಕಿಗೆ ಬಂದಿತ್ತು
ಅಂದು ತಲೆ ಮರೆಸಿಕೊಂಡು ಹೋಗಿದ್ದ ಮಾಯಾಳ ಪ್ರೇಮಿ ಆರವ್ನನ್ನು ಉತ್ತರ ಭಾರತದಲ್ಲಿ ಪತ್ತೆ ಹಚ್ಚಿದ ಇಂದಿರಾನಗರ ಪೊಲೀಸರು ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಕೊಲೆಯಾದ ದಿನದಿಂದ ಆರೋಪಿ ಪತ್ತೆಗಾಗಿ ಪೊಲೀಸರು ಎರಡು ತಂಡಗಳನ್ನು ರಚಿಸಿದ್ದರು. ಸದ್ಯ ಉತ್ತರ ಭಾರತದಲ್ಲಿ ಆರವ್ನನ್ನು ವಶಕ್ಕೆ ಪಡೆದಿರುವ ಪೊಲೀಸರು ಬೆಂಗಳೂರಿಗೆ ಕರೆತರುತ್ತಿದ್ದಾರೆ.