ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ವಿರಾಟ್ ಕೊಹ್ಲಿ (Virat Kohli) ತಮ್ಮ 50 ನೇ ಏಕದಿನ ಪಂದ್ಯ ಶತಕವನ್ನು ಗಳಿಸಿದ್ದು ಈ ಮೂಲಕ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದರು.
ಕೊಹ್ಲಿ ಆಟಕ್ಕೆ ವಿಶ್ವವೇ ಮನಸೋತಿದ್ದು, ಎಲ್ಲೆಡೆಯಿಂದ ಶುಭಹಾರೈಕೆಗಳು ಬರುತ್ತಿದೆ. ಇದೀಗ ವಿರಾಟ್ ಕೊಹ್ಲಿ ಆಟಕ್ಕೆ ಪ್ರಧಾನಿ ಮೋದಿ ಅವರು ಕೂಡ ಧನ್ಯವಾದ ತಿಳಿಸಿದ್ದಾರೆ .
‘ಇಂದು(ಬುಧವಾರ) ವಿರಾಟ್ ಕೊಹ್ಲಿ (Virat Kohli) ಕೇವಲ ತಮ್ಮ 50 ನೇ ಏಕದಿನ ಪಂದ್ಯ ಶತಕವನ್ನು ಗಳಿಸಿದ್ದು ಮಾತ್ರವಲ್ಲ ಅತ್ಯುತ್ತಮ ಕ್ರೀಡಾ ಮನೋಭಾವವನ್ನು ವ್ಯಾಖ್ಯಾನಿಸುವ ಶ್ರೇಷ್ಠತೆ ಮತ್ತು ಪರಿಶ್ರಮದ ಮನೋಭಾವವನ್ನು ಸಹ ಪ್ರದರ್ಶಿಸಿದ್ದಾರೆ. ಈ ಗಮನಾರ್ಹ ಮೈಲುಗಲ್ಲು ಅವರ ನಿರಂತರ ಸಮರ್ಪಣೆ ಮತ್ತು ಅಸಾಧಾರಣ ಪ್ರತಿಭೆಗೆ ಸಾಕ್ಷಿಯಾಗಿದೆ. ನಾನು ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಅವರು ಮುಂದಿನ ಪೀಳಿಗೆಗೆ ಬೆಂಚ್ಮಾರ್ಕ್ ಸ್ಥಾಪಿಸುವುದನ್ನು ಮುಂದುವರಿಸಲಿ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಟ್ವೀಟ್ ಮಾಡಿದ್ದಾರೆ.