ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವಕಪ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಪಾಕಿಸ್ತಾನ ಕೇವಲ 4 ಪಂದ್ಯ ಗೆದ್ದು ಲೀಗ್ ಹಂತದಿಂದಲೇ ಹೊರಬಿಡಿದ್ದು, ಎಲ್ಲೆಡೆ ಅಸಮಾಧಾನಕ್ಕೆ ಕಾರಣವಾಗಿತ್ತು.
ಇದೀಗ ಬಾಬರ್ ಅಜಮ್ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಈ ಕುರಿತು ಟ್ವೀಟ್ ಮೂಲಕ ರಾಜೀನಾಮೆ ಘೋಷಿಸಿದ್ದಾರೆ.
ಇಡೀ ಇತ್ತೀಚೆಗಷ್ಟೇ ಪಾಕಿಸ್ತಾನ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ರಾಜೀನಾಮೆ ನೀಡಿದ್ದರು.
ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಕೇವಲ 8 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಪ್ರಮುಖ ತಂಡಗಳ ವಿರುದ್ಧ ಸೋಲಿನ ಜೊತೆಗೆ ಭಾರತ ಹಾಗೂ ಆಫ್ಘಾನಿಸ್ತಾನ ವಿರುದ್ದ ಸೋಲು ಪಾಕಿಸ್ತಾನಕ್ಕೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪಾಕಿಸ್ತಾನ ತಂಡದ ಕಳಪೆ ಪ್ರದರ್ಶನಕ್ಕೆ ನಾಯಕ ಬಾಬರ್ ಅಜಮ್ ಕೂಡ ಕಾರಣ ಅನ್ನೋ ಆರೋಪ ಬಹುತೇಕ ಮಾಜಿ ಕ್ರಿಕೆಟಿಗರು ಮಾಡಿದ್ದರು.
ಇದೀಗ ತವರಿಗೆ ಮರಳುತ್ತಿದ್ದಂತೆ ಬಾಬರ್ ಅಜಮ್ ಪಾಕಿಸ್ತಾನ ನಾಯಕತ್ವ ತೊರೆದಿದ್ದಾರೆ.