ಬಂಗಾಳ ಹಿಂಸಾಚಾರ: ಮುರ್ಷಿದಾಬಾದ್‌ ಗೆ ರಾಜ್ಯಪಾಲರ ಭೇಟಿ! ದೀದಿ ಸರ್ಕಾರದ ಮೇಲೆ ಭಾರವಾಗುತ್ತ ಬೋಸ್ ವರದಿ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು, ರಾಜ್ಯಪಾಲ ಸಿ.ವಿ. ಆನಂದ್ ಬೋಸ್ ಅವರು ಮುರ್ಷಿದಾಬಾದ್‌ನ ಗಲಭೆ ಪೀಡಿತ ಪ್ರದೇಶಗಳಾದ ಸುತಿ, ಧುಲಿಯಾ, ಸಮ್ರೇಸರ್‌ಗಂಜ್ ಮತ್ತು ಜಂಗಿಪುರಗಳಿಗೆ ಭೇಟಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಸಂತ್ರಸ್ತರನ್ನು ಭೇಟಿಯಾಗಿ, ಕಾನೂನು-ಸುವ್ಯವಸ್ಥೆಯನ್ನು ಮೌಲ್ಯಮಾಪನ ಮಾಡಿದ್ದಾರೆ. ಇದರೊಂದಿಗೆ, ರಾಜ್ಯಪಾಲರು ತಮ್ಮ ಭೇಟಿಯ ಆಧಾರದ ಮೇಲೆ ಕೇಂದ್ರ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಿದ್ದಾರೆ.

ಈ ವರದಿಯು ರಾಜ್ಯ ಸರ್ಕಾರದ ಕಾನೂನು-ಸುವ್ಯವಸ್ಥೆ ಕಾಪಾಡುವಿಕೆಯಲ್ಲಿ ವಿಫಲತೆಯನ್ನು ಸೂಚಿಸಿದರೆ, ರಾಷ್ಟ್ರಪತಿ ಆಳ್ವಿಕೆ (ಆರ್ಟಿಕಲ್ 356) ಶಿಫಾರಸು ಮಾಡುವ ಸಾಧ್ಯತೆ ಇದೆ, ಆದ್ದರಿಂದ, ಇದು ಮಮತಾ ಸರ್ಕಾರಕ್ಕೆ ಗಂಭೀರ ಸವಾಲಾಗಿದೆ.

ಇನ್ನು ಬಿಜೆಪಿಯು ರಾಷ್ಟ್ರಪತಿ ಆಳ್ವಿಕೆಯ ಒತ್ತಾಯವನ್ನು ಮುಂದಿಟ್ಟಿದೆ. ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲು ಸಾಂವಿಧಾನಿಕ ವೈಫಲ್ಯವನ್ನು ಸ್ಪಷ್ಟವಾಗಿ ಸಾಬೀತುಪಡಿಸಬೇಕು. ಮುಂದುವರೆದು, ಈ ವರದಿಯನ್ನು ಸಂಸತ್ತಿನ ಎರಡೂ ಸದನಗಳಲ್ಲಿ ಅನುಮೋದಿಸಬೇಕು, ಮತ್ತು ಸುಪ್ರೀಂ ಕೋರ್ಟ್‌ನಿಂದ ಈ ವರದಿ ಪರಿಶೀಲನೆಗೆ ಒಳಪಡಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!