ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗಷ್ಟೇ ಕರ್ನಾಟಕ ಸರ್ಕಾರ ಮಹಿಳೆಯರಿಗೆ ಶಕ್ತಿ ಯೋಜನೆಯಡಿ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣಿಸುವ ಅವಕಾಶ ನೀಡಿದೆ. ಈ ಯೋಜನೆ ಕೇವಲ ಕರ್ನಾಟಕ ಮಹಿಳೆಯರಿಗೆ ಮಾತ್ರ ಅನ್ವಯವಾಗಲಿದ್ದು, ಉಚಿತ ಪ್ರಯಾಣಕ್ಕಾಗಿ ಆಧಾರ್ ಅಥವಾ ಯಾವುದಾದರೂ ಐಡಿ ಕಾರ್ಡ್ ತೋರಿಸಲು ಸರ್ಕಾರ ಸೂಚಿಸಿದೆ. ಈ ಹಿನ್ನೆಲೆ ಬಸ್ ಹತ್ತಿದ ಯುವತಿಯೊಬ್ಬಳು ಆಧಾರ್ ತೋರಿಸದೆ ಕಂಡಕ್ಟರ್ ಜೊತೆ ವಾಗ್ವಾದಕ್ಕಿಳಿದ ವಿಡಿಯೋವೊಂದು ವೈರಲ್ ಆಗುತ್ತಿದೆ.
ಈ ಘಟನೆ ಬೆಂಗಳೂರಿನ ಬಿಎಂಟಿಸಿ ಬಸ್‌ನಲ್ಲಿ ನಡೆದಿದ್ದು, ಬಸ್ ಕಂಡಕ್ಟರ್ ಹಾಗೂ ಯವತಿ ನಡುವೆ ಐಡಿ ಕಾರ್ಡ್ ವಿಚಾರವಾಗಿ ನಡೆದ ಮಾತಿನ ಚಕಮಕಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಂಡಕ್ಟರ್ ಐಡಿ ಕಾರ್ಡ್ ಕೇಳಿದ್ದಕ್ಕೆ ತಾನು ಕೇಂದ್ರೀಯ ಅಬಕಾರಿ ಅಧಿಕಾರಿ ಎಂದೂ ತಾನೂ ಇಲ್ಲಿಯೇ ಇರುವುದಾಗಿ ಹೇಳುತ್ತಾಳೆ. ಮೇಡಂ..ನಮಗೆ ಆಧಾರ್ ಅಥವಾ ವೋಟರ್ ಐಡಿ ಇದ್ದರೆ ತೋರಿಸಿದರೆ ಮಾತ್ರ ಉಚಿತ ಪ್ರಯಾಣಕ್ಕೆ ಅವಕಾಶ ಎಂದು ಕಂಡಕ್ಟರ್ ಪರಿಪರಿಯಾಗಿ ಹೇಳಿದರೂ ಕಿವಿಗೊಡದ ಆಕೆ ಜೋರು ಧ್ವನಿಯಲ್ಲಿ ಮಾತನಾಡಲು ಮುಂದಾಗುತ್ತಾಳೆ. ಆಗ ಬಸ್‌ನಲ್ಲಿದ್ದವರು ಕಂಡಕ್ಟರ್ ಪರ ವಹಿಸಿ ಆಧಾರ್ ತೋರಿಸುವಂತೆ ಹೇಳಿದರೂ ಜಗ್ಗದ ಆಕೆ ತನ್ನ ವಾದ ಮುಂದುವರಿಸುವ ವಿಡಿಯೋ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ವಿವಿಧ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ಕೇಂದ್ರ ಸರ್ಕಾರಿ ನೌಕರರು ಕೇವಲ ಉಚಿತ ಬಸ್ ಪ್ರಯಾಣ ಹೀಗಾಡುವುದೇ? ಅವರು ಬಳಸುವ ಡೇಟಾ ಬಸ್ ಪ್ರಯಾಣಕ್ಕಿಂತ ಜಾಸ್ತಿ ಎಂದು ಆಕೆ ವಿರುದ್ಧ ಟೀಕಾ ಪ್ರಹಾರ ನಡೆಯುತ್ತಿದೆ.