November 12, 2026
Thursday, November 12, 2026
spot_img

ಬೆಳಕಿನ ಹಬ್ಬದ ಆಚರಣೆಗೆ ಬೆಂಗಳೂರೇ ಬೆಸ್ಟ್‌! ಸಿಲಿಕಾನ್‌ ಸಿಟಿಯಲ್ಲಿ ದೀಪಾವಳಿ ಆಚರಿಸಿದ ದೀಪ್‌ವೀರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಳಕಿನ ಹಬ್ಬದ ಆಚರಣೆಯನ್ನು ಬೆಂಗಳೂರಿನ ಜನ ಅದ್ಧೂರಿಯಾಗಿ ಆಚರಣೆ ಮಾಡುತ್ತಾರೆ. ಕುಟುಂಬದವರ ಜೊತೆ ದೀಪಾವಳಿ ಸೆಲೆಬ್ರೇಟ್‌ ಮಾಡೋದಕ್ಕೆ ಇದೇ ಊರು ಬೆಸ್ಟ್‌ ಎಂದು ನಟಿ ದೀಪಿಕಾ ಪಡುಕೋಣೆ ಹಾಗೂ ರಣ್‌ವೀರ್‌ ಸಿಂಗ್‌ ತಮ್ಮ ಮಕ್ಕಳೊಂದಿಗೆ ಬೆಂಗಳೂರಿಗೆ ಆಗಮಿಸಿದ್ದಾರೆ.

ಇತ್ತೀಚೆಗಷ್ಟೇ ದೀಪಿಕಾ ತಮ್ಮ ಮಗಳ ಜೊತೆ ಇರುವ ಫೋಟೋವನ್ನು ಪೋಸ್ಟ್‌ ಹಂಚಿಕೊಂಡು ಮಗಳ ಹೆಸರನ್ನು ರಿವೀಲ್‌ ಮಾಡಿದ್ದರು. ಇದೀಗ ಮಗಳ ಮೊದಲ ದೀಪಾವಳಿಯನ್ನು ಆಚರಿಸಲು ಬೆಂಗಳೂರಿಗೆ ಆಗಮಿಸಿ ಕುಟುಂಬದವರೊಡನೆ ಸಂಭ್ರಮಿಸುತ್ತಿರುವ ಫೋಟೊ ಅಪ್‌ಲೋಡ್‌ ಮಾಡಿದ್ದಾರೆ.

ರಣ್‌ವೀರ್‌ ಸಿಂಗ್‌, ದೀಪಿಕಾ, ಪ್ರಕಾಶ್‌ ಪಡುಕೋಣೆ, ಉಜ್ವಲಾ ಪಡುಕೋಣೆ, ಅನಿಶಾ ಪಡುಕೋಣೆ ಹಾಗೂ ಕೆಲವು ಆಪ್ತ ಸ್ನೇಹಿತರು ಫೋಟೊದಲ್ಲಿ ಕಾಣಿಸಿದ್ದಾರೆ. ಹಬ್ಬದ ವಿಶೇಷ ಉಡುಗೆಯಲ್ಲಿ ಕಂಗೊಳಿಸಿರುವ ಈ ಜೋಡಿ ಎಲ್ಲರ ಗಮನ ಸೆಳೆದಿದೆ. ರಣ್‌ವೀರ್ ನೇರಳೆ ಬಣ್ಣದ ಕುರ್ತಾ ಹಾಗೂ ವೇಸ್ಟ್‌ಕೋಟ್ ಧರಿಸಿದ್ದರೆ, ದೀಪಿಕಾ ಸಾಂಪ್ರದಾಯಿಕ ಹಳದಿ ಬಣ್ಣದ ಸೂಟ್‌ನಲ್ಲಿ ಮಿಂಚಿದ್ದಾರೆ.

Must Read