ಬೆಂಗಳೂರು ಮೆಟ್ರೋದಲ್ಲಿ ತಪ್ಪಿದ ಭಾರೀ ಅನಾಹುತ !

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಬೆಂಗಳೂರು ಮೆಟ್ರೋ ಪಿಲ್ಲರ್‌ ಕುಸಿತ ಪ್ರಕರಣದ ನೆನಪು ಮಾಸುವ ಮುನ್ನವೇ ಎದುರಾಗಲಿದ್ದ ಭಾರೀ ಅನಾಹುತವೊಂದು ತಪ್ಪಿದೆ.

ರಾಜ್ಯದ ರಾಜಧಾನಿ ಬೆಂಗಳೂರಲ್ಲಿ ನಾಯಂಡಹಳ್ಳಿಯಿಂದ ಕೆಂಗೇರಿಗೆ ಹೋಗುವ ನೇರಳೆ ಬಣ್ಣದ (Purple line) ಮೆಟ್ರೋ ಮಾರ್ಗದ, ಪಟ್ಟಣಗೆರೆ ನಿಲ್ದಾಣದ ಕೂಗಳತೆ ದೂರದ ಹಳಿಯಲ್ಲಿ ಬಿರುಕು ಕಾಣಿಸಿಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಮೆಟ್ರೋ ಹಳಿಯಲ್ಲಿ ಬಿರುಕು ಮೂಡಿರುವುದನ್ನು ಸಿಬ್ಬಂದಿಗಳು ಗಮನಿಸಿಕೊಂಡು ಬಿಎಂಆರ್‌ಸಿಎಲ್‌ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಇದರಿಂದ ಇಡೀ ದಿನ ಮತ್ತೊಂದು ಟ್ರ್ಯಾಕ್​ನಲ್ಲಿ ಮೆಟ್ರೋ ಓಡಾಟ ನಡೆಸಿದೆ. ಬಳಿಕ ಮೆಟ್ರೋ ಟೀಮ್ ಕೂಡಲೇ ಎಚ್ಚೆತ್ತು ದುರಸ್ಥಿ ಮಾಡಿದ್ದಾರೆ. ಟ್ರ್ಯಾಕ್ ಸರಿಪಡಿಸಿದ ನಂತರ ಎರಡು ಹಳಿಯಲ್ಲಿ‌ ಎಂದಿನಂತೆ ಮೆಟ್ರೋ ಓಡಾಟ ಶುರು ಮಾಡಿಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!