Thursday, March 30, 2023

Latest Posts

ಫೆ.27 ರಿಂದ ಬೆಂಗಳೂರು-ಮೈಸೂರು ಹೆದ್ದಾರಿ ಟೋಲ್‌ ಸಂಗ್ರಹ ಆರಂಭ: ಇಲ್ಲಿದೆ ಶುಲ್ಕದ ಮಾಹಿತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ (Bangalore-Mysore Expressway) ಮೊದಲ ಹಂತದ ಕಾಮಗಾರಿ ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ಫೆ.27ರಿಂದ ಮೊದಲ ಹಂತದ ಟೋಲ್‌ ಕೇಂದ್ರಗಳು ಕಾರ್ಯಾರಂಭ ಮಾಡಲಿವೆ.

ಬೆಂಗಳೂರು-ನಿಡಘಟ್ಟವರೆಗಿನ ಹೆದ್ದಾರಿಯಲ್ಲಿ ಸಾಗಲು ವಾಹನಗಳಿಗೆ ನಿಗದಿತ ಸುಂಕ ನೀಡಬೇಕಾಗಿದೆ.

ನಾಳೆ ಬೆಳಗ್ಗೆ ೮ರಿಂದ ಟೋಲ್‌ ವಸೂಲಾತಿ ಆರಂಭವಾಗಲಿದೆ. ಈ ಸಂಬಂಧ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಭಾನುವಾರ ಆದೇಶ ಹೊರಡಿಸಿದೆ. ಒಟ್ಟು 118 ಕಿ.ಮೀ ಉದ್ದದ ಬೆಂಗಳೂರು- ಮೈಸೂರು ದಶಪಥ ಹೆದ್ದಾರಿ ನಿರ್ಮಾಣವಾಗುತ್ತಿದ್ದು, ಈ ಪೈಕಿ ಬೆಂಗಳೂರು-ನಿಡಘಟ್ಟ ನಡುವಿನ ಮೊದಲ ಹಂತದ 55.63 ಕಿ.ಮೀ. ಕಾಮಗಾರಿ ಪೂರ್ಣವಾಗಿದೆ.

ಆರು ಪಥಗಳ ಎಕ್ಸ್‌ಪ್ರೆಸ್ ವೇನಲ್ಲಿ ಸಂಚರಿಸುವವರಿಗೆ ಮಾತ್ರ ಟೋಲ್ ಅನ್ವಯ ಆಗಲಿದ್ದು, ಸರ್ವಿಸ್ ರಸ್ತೆಯಲ್ಲಿ ಸಂಚಾರಕ್ಕೆ ಯಾವುದೇ ಟೋಲ್ ಇರುವುದಿಲ್ಲ. ವಿವಿಧ ಮಾದರಿಯ ವಾಹನಗಳಿಗೆ ಪ್ರತ್ಯೇಕ ದರ ನಿಗದಿ ಮಾಡಲಾಗಿದ್ದು, ನಿಯಮಿತವಾಗಿ ಪ್ರಯಾಣಿಸುವವರಿಗೆ ತಿಂಗಳ ಪಾಸ್ ಸೌಲಭ್ಯವೂ ಇದೆ.

ಟೋಲ್‌ ದರ ಪಟ್ಟಿ

ಕಾರು, ಜೀಪ್‌, ವ್ಯಾನ್‌ಗಳಿಗೆ

ಏಕಮುಖ ಸಂಚಾರ: 135 ರೂ.
ಅದೇ ದಿನ ಮರು ಸಂಚಾರ: 205 ರೂ.
ಸ್ಥಳೀಯ ವಾಹನಗಳು: 70 ರೂ.
ಒಂದು ತಿಂಗಳ 50 ಏಕ‌ಮುಖ ಸಂಚಾರದ ಪಾಸ್: 4525 ರೂ.
ಲಘು ವಾಣಿಜ್ಯ ವಾಹನಗಳು, ಲಘು ಸರಕು ವಾಹನಗಳು, ಮಿನಿ ಬಸ್‌ಗಳು
ಏಕಮುಖ ಸಂಚಾರ: 220 ರೂ.
ಅದೇ ದಿನ ಮರು ಸಂಚಾರ: 320 ರೂ.
ಸ್ಥಳೀಯ ವಾಹನಗಳು: 110 ರೂ.
ಒಂದು ತಿಂಗಳ 50 ಏಕ‌ಮುಖ ಸಂಚಾರದ ಪಾಸ್: 7315 ರೂ.

ಬಸ್ ಅಥವಾ ಟ್ರಕ್ (ಎರಡು ಆಯಕ್ಸೆಲ್)

ಏಕಮುಖ ಸಂಚಾರ: 460 ರೂ.
ಅದೇ ದಿನ ಮರು ಸಂಚಾರ: 690 ರೂ.
ಸ್ಥಳೀಯ ವಾಹನಗಳಿಗೆ 230 ರೂ.
ಒಂದು ತಿಂಗಳ 50 ಏಕ‌ಮುಖ ಸಂಚಾರದ ಪಾಸ್: 15,325 ರೂ.

ವಾಣಿಜ್ಯ ವಾಹನಗಳು (ಮೂರು ಆಯಕ್ಸೆಲ್)

ಏಕಮುಖ ಸಂಚಾರ: 500ರೂ.
ಅದೇ ದಿನ ಮರು ಸಂಚಾರ: 750 ರೂ.
ಸ್ಥಳೀಯ ವಾಹನಗಳಿಗೆ 250 ರೂ.
ಒಂದು ತಿಂಗಳ 50 ಏಕ‌ಮುಖ ಸಂಚಾರದ ಪಾಸ್ : 16,715 ರೂ.

ಭಾರಿ ನಿರ್ಮಾಣ ಯಂತ್ರ, ಭೂ ಅಗೆತ ಸಾಧನ, ಬಹು ಆಯಕ್ಸೆಲ್ವಾಹನ (6ರಿಂದ 8 ಆಯಕ್ಸೆಲ್)

ಏಕಮುಖ ಸಂಚಾರಕ್ಕೆ 720 ರೂ.
ಅದೇ ದಿನ ಮರು ಸಂಚಾರ: 1080 ರೂ.
ಸ್ಥಳೀಯ ವಾಹನಗಳಿಗೆ 360 ರೂ.
ಒಂದು ತಿಂಗಳ 50 ಏಕ‌ಮುಖ ಸಂಚಾರದ ಪಾಸ್: 24,030 ರೂ.

ಅತಿ ಗಾತ್ರದ ವಾಹನಗಳು (7ರಿಂದ ಹೆಚ್ಚಿನ ಆಕ್ಸೆಲ್)

ಏಕಮುಖ ಸಂಚಾರ: 880 ರೂ.
ಅದೇ ದಿನ ಮರು ಸಂಚಾರ: 1315 ರೂ.
ಸ್ಥಳೀಯ ವಾಹನಗಳಿಗೆ 440 ರೂ.
ಒಂದು ತಿಂಗಳ 50 ಏಕ‌ಮುಖ ಸಂಚಾರದ ಪಾಸ್: 29,255 ರೂ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!