6 ಮೆಟ್ರೋ ನಿಲ್ದಾಣಗಳಿಗೆ ಮರು ನಾಮಕರಣ : ಹೊಸ ಹೆಸರುಗಳು ಹೀಗಿವೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್ :‌

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ 6 ಮೆಟ್ರೋ ರೈಲು ನಿಲ್ದಾಣಗಳ ಹೆಸರನ್ನು ಬದಲಾಯಿಸಿದೆ. ಸ್ಥಳೀಯರ ಗೊಂದಲದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಎಂಆರ್​ಸಿಎಲ್ ಮೂಲಗಳು ತಿಳಿಸಿವೆ.

ಕನ್ನಡಪರ ಸಂಘಟನೆಗಳ ಮನವಿಯ ಆಧಾರದ ಮೇಲೆ ಕೆ.ಆರ್. ಪುರಂ ಮೆಟ್ರೋ ರೈಲು ನಿಲ್ದಾಣ ಎಂದು ಇದ್ದ ಹೆಸರನ್ನು ಕೃಷ್ಣರಾಜಪುರ (ಕೆ.ಆರ್. ಪುರ) ರೈಲು ನಿಲ್ದಾಣ ಎಂದು ಬದಲಾವಣೆಯಾಗಿದೆ.

ಜೊತೆಗೆ ಮಹದೇವಪುರ ಮೆಟ್ರೋ ನಿಲ್ದಾಣವನ್ನು ಸಿಂಗಯ್ಯಪ್ಪನಪಾಳ್ಯ ನಿಲ್ದಾಣವೆಂದು ಮರುನಾಮಕರಣ ಮಾಡಲಾಗಿದೆ.

ಕಾಡುಗೋಡಿ ಮೆಟ್ರೋ ನಿಲ್ದಾಣವನ್ನು ಕಾಡುಗೋಡಿ ಟ್ರೀ ಪಾರ್ಕ್ ಎಂದು ಮರುನಾಮಕರಣ ಮಾಡಲಾಗಿದೆ.

ಹೂಡಿ ಜಂಕ್ಷನ್ ಮೆಟ್ರೋ ನಿಲ್ದಾಣವನ್ನು ಹೂಡಿ ಎಂದು ಬದಲಾಯಿಸಲಾಗಿದೆ.

ಚನ್ನಸಂದ್ರ ಮೆಟ್ರೋ ರೈಲು ನಿಲ್ದಾಣವನ್ನು ಹೋಮ್ ಫಾರ್ಮ್ ಚನ್ನಸಂದ್ರ ಎಂದು ಬದಲಾಯಿಸಲಾಗಿದೆ.

ವೈಟ್​ಫೀಲ್ಡ್ ಮೆಟ್ರೋ ಅನ್ನು ವೈಟ್​ಫೀಲ್ಡ್ (ಕಾಡುಗೋಡಿ) ಎಂದು ಮರುನಾಮಕರಣ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!