ಹೊಸ ವರ್ಷ ವೆಲ್‌ಕಮ್‌ ಮಾಡಲು ಬೆಂಗಳೂರು ಸಜ್ಜು: ಸಂಚಾರ ಮಾರ್ಗ ಬದಲಾವಣೆ, ಎಲ್ಲೆಡೆ ಖಾಕಿ ಕಣ್ಗಾವಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹೊಸ ವರ್ಷ ವೆಲ್‌ಕಮ್‌ ಮಾಡಲು ರಾಜ್ಯ ರಾಜಧಾನಿ ಬೆಂಗಳೂರು ಮಹಾನಗರ ಸಜ್ಜಾಗಿದೆ. ಎಂ.ಜಿ ರಸ್ತೆ, ಬ್ರಿಡೇಗ್ ರಸ್ತೆ, ಚರ್ಚ್ ಸ್ಟ್ರೀಟ್ ಸೇರಿದಂತೆ ಹಲವೆಡೆ ಸಂಭ್ರಮಕ್ಕೆ ಪೊಲೀಸರು ಅನುಮತಿ ಸೂಚಿಸಿದ್ದು, ಯಾವುದೇ ಆಹಿತಕರ ಘಟನೆ ನಡೆಯದಂತೆ ನಿಯಮಗಳನ್ನು ಜಾರಿ ಮಾಡಿದ್ದಾರೆ. ನಗರದ ಮೂಲೆ ಮೂಲೆಗಳಲ್ಲು ಖಾಕಿ ಹದ್ದಿನ ಕಣ್ಣಿಟ್ಟಿದ್ದು, ಬೆಂಗಳೂರಿನಾದ್ಯಂತ ಒಟ್ಟು 8,500ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. ಹಾಗೆಯೇ ಸಾರ್ವಜನಿಕರ ಹಿತದೃಷ್ಟಿಯಿಂದ, ಟ್ರಾಫಿಕ್‌ ಜಾಮ್‌ ಆಗದಂತೆ ಸಂಚಾರ ಮಾರ್ಗದಲ್ಲಿ ಬದಲಾವಣೆ ಸಹ ಮಾಡಲಾಗಿದೆ.

ನಗರದಲ್ಲಿ ಹೇಗಿದೆ ಭದ್ರತೆ? 

ಸಿಲಿಕಾನ್‌ ಸಿಟಿಯಲ್ಲಿ ಹೊಸವರ್ಷಾಚರಣೆ ಭದ್ರತೆಗಾಗಿ 8,500ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದ್ದು,  ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್‌ ಸ್ಟ್ರೀಟ್‌, ರೆಸಿಡೆನ್ಸಿ ರಸ್ತೆ, ಕೋರಮಂಗಲ, ಇಂದಿರಾನಗರ, ವೈಟ್​ಫೀಲ್ಡ್​ ಸೇರಿದಂತೆ ಹಲವೆಡೆ ಬಂದೋಬಸ್ತ್​ ಏರ್ಪಡಿಸಲಾಗಿದೆ. ನಾಲ್ವರು ಡಿಸಿಪಿ, 10 ಎಸಿಪಿ ಸೇರಿ 3 ಸಾವಿರ ಸಿಬ್ಬಂದಿ ಜೊತೆಗೆ 160 ಇನ್ಸ್​ಪೆಕ್ಟರ್​, 600 ಪಿಎಸ್​ಐ, 800 ಎಎಸ್​ಐ, 1800 ಹೆಡ್​ಕಾನ್ಸ್​ಟೇಬಲ್​, 5200 ಕಾನ್ಸ್​ಟೇಬಲ್​ಗಳನ್ನು ಅಲರ್ಟ್‌ ಮಾಡಲಾಗಿದೆ.

ಎಂ.ಜಿ.ರಸ್ತೆಯ ಎಂಟ್ರಿಯಲ್ಲಿ ಮೆಟಲ್ ಡಿಟೆಕ್ಟರ್​ಗಳ ಅಳವಡಿಸಿದ್ದು, ಪ್ರಮುಖ ಪ್ರದೇಶಗಳಲ್ಲಿ 20 ಡ್ರೋನ್​ ಕ್ಯಾಮರಾಗಳ ಬಳಕೆ ಮಾಡಲಾಗಿದೆ. ಇನ್ನು ಮಧ್ಯರಾತ್ರಿ 1ರವರೆಗೆ ಮಾತ್ರ ಹೊಸ ವರ್ಷಾಚರಣೆಗೆ ಅವಕಾಶ ನೀಡಿದ್ದು, ಹೆಚ್ಚು ಪಾರ್ಟಿ ಮಾಡುವವರಿಗೆ ಪೊಲೀಸರು ತಮ್ಮ ಸ್ಟೈಲ್‌ನಲ್ಲಿ ರುಚಿ ತೋರಿಸಲಿದ್ದಾರೆ. ಸುರಕ್ಷತೆಗಾಗಿ ವಾಚ್ ​ಟವರ್ ಮತ್ತು ಮಹಿಳಾ ಸುರಕ್ಷತಾ ಕೊಠಡಿಗಳನ್ನು ಸ್ಥಾಪಿಸಲಾಗಿದೆ.

ಯಾವ್ಯಾವ ಮಾರ್ಗ ಬಂದ್‌ ಆಗಲಿದೆ?

ಎಂಜಿ ರಸ್ತೆಯಿಂದ ಅನಿಲ್ ಕುಂಬ್ಳೆ ವೃತ್ತ, ಟ್ರಿನಿಟಿ ಸರ್ಕಲ್‌, ಬ್ರಿಗೇಡ್ ರಸ್ತೆ,  ಆರ್ಟ್ ಕ್ರ್ಯಾಫ್ಟ್ ಜಂಕ್ಷನ್, ಅಪೇರಾ ಜಂಕ್ಷನ್​, ಚರ್ಚ್ ಸ್ರ್ಟೀಟ್, ಬ್ರಿಗೇಡ್ ರೋಡ್‌, ಸೆಂಟ್ ಮಾರ್ಕ್ಸ್, ರೆಸ್ಟ್ ಹೌಸ್ ರೋಡ್‌, ಮ್ಯೂಸಿಯಂ ರೋಡ್‌ನಿಂದ ಎಸ್.ಬಿ.ಐ ವೃತ್ತದವರೆಗೆ ಇಂದು ಸಂಜೆ 4 ಗಂಟೆ ಒಳಗಾಗಿ ವಾಹನ ತೆರವುಗೊಳಿಸಬೇಕೆಂದು ಸೂಚಿಸಲಾಗಿದೆ. ಪೊಲೀಸ್​ ವಾಹನ, ತುರ್ತು ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶವಿದ್ದು, ನಿಯಮ ಉಲ್ಲಂಘಿಸಿದರೆ ದಂಡ ಗ್ಯಾರೆಂಟಿ.

ಪಾರ್ಟಿ ಮುಗಿದ ಮೇಲೆ ಎಲ್ಲರೂ ಒಂದೇ ಕಡೆ ಬರುವುದರಿಂದ ಟ್ರಾಫಿಕ್‌ ಜಾಮ್‌ ಆಗುವ ಕಾರಣದಿಂದ ಮಾರ್ಗ ಬದಲಾವನೆ ಮಾಡಲಾಗಿದೆ. ಎಂಜಿ ರಸ್ತೆಯಿಂದ ಹಲಸೂರು ಹೋಗುವವರು- ಅನಿಲ್ ಕುಂಬ್ಳೆ ರಸ್ತೆಯಲ್ಲಿ ಎಡಕ್ಕೆ ತಿರುಗಿ ಸೆಂಟ್ರಲ್ ಸ್ರ್ರೀಟ್ – ಬಿ.ಆರ್.ವಿ ಜಂಕ್ಷನ್ ಬಲ‌ ತಿರುವು ಪಡೆದು ಕಬ್ಬನ್ ರಸ್ತೆಯ ಮೂಲಕವಾಗಿ ವೆಬ್ಸ್ ಜಂಕ್ಷನ್ ಬಳಿಯಿಂದ ಸಾಗಬೇಕು. ಹಲಸೂರು ಕಡೆಯಿಂದ ಕಂಟೋನ್ ಮೆಂಟ್‌ಕಡೆ ಸಾಗುವವರು ಟ್ರಿನಿಟಿ ವೃತ್ತದಲ್ಲಿ ಬಲ‌ ತಿರುವು ಪಡೆದು- ಹಲಸೂರು ರಸ್ತೆ- ಡಿಕಂನ್ಸ್​​ನ್ ರಸ್ತೆಯ ಮಾರ್ಗವಾಗಿ– ಕಬ್ಬನ್ ರಸ್ತೆ ಮೂಲಕ‌ ಸಂಚಾರ ಮಾಡಬೇಕು.

ಪಾದಚಾರಿಗಳಿಗಾಗಿ ಬ್ರಿಗೇಡ್‌ ರಸ್ತೆಯಲ್ಲಿ ಎಂಜಿ ರಸ್ತೆ ಜಂಕ್ಷನ್‌ನಿಂದ ಅಪೇರಾ ಜಂಕ್ಷನ್ ಕಡೆಗೆ ನಡೆದುಕೊಂಡು ಹೋಗಬಹುದು. ಇಲ್ಲಿ ಟು ವೇ ಇಲ್ಲ ಒನ್ ವೇಗೆ ಮಾತ್ರ ಅನುಮತಿ ನೀಡಲಾಗಿದೆ. ಮತ್ತೆ ಎಂ.ಜಿ‌ ರೋಡ್‌ಗೆ ಬರಬೇಕಾದರೆ ರೆಸಿಡೆನ್ಸಿ ರಸ್ತೆ ಕ್ರಾಸ್ ಮಾರ್ಗದ ಮೂಲಕ ಬರಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!