BUDGET 2025 | ಬೆಂಗಳೂರು ಮಂದಿಗೆ ಬಜೆಟ್‌ ಮೇಲೆ ಭಾರೀ ನಿರೀಕ್ಷೆ, ಏನಿದೆ ಎಕ್ಸ್‌ಪೆಕ್ಟೇಷನ್ಸ್‌?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೆಲವೇ ಕ್ಷಣದಲ್ಲಿ ಬಜೆಟ್-2025 ಮಂಡನೆ ಮಾಡಲಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರದ ಚಿತ್ತ ಕೇಂದ್ರದ ಬಜೆಟ್​ ಮೇಲೆ ನೆಟ್ಟಿದೆ. ಬೆಂಗಳೂರು ಅಭಿವೃದ್ಧಿ, ವಿವಿಧ ಬೇಡಿಕೆಗಳ ನಿರೀಕ್ಷೆಯಲ್ಲಿ ಇಡೀ ಕರ್ನಾಟಕ ಇದೆ.

ಹಲವು ಯೋಜನೆಗಳಿಗೆ ಅನುದಾನ ನೀಡುವಂತೆ ರಾಜ್ಯ ಸರ್ಕಾರ ಈಗಾಗಲೇ ಬೇಡಿಕೆಯನ್ನಿಟ್ಟಿದೆ. ಬರೋಬ್ಬರಿ 90,000 ಕೋಟಿ ವೆಚ್ಚದ ಯೋಜನೆಗಳಿಗೆ ನೆರವು ನೀಡುವಂತೆ ರಾಜ್ಯ ಸರ್ಕಾರ ಬೇಡಿಕೆಯನ್ನಿಟ್ಟಿದೆ. ಕೇಂದ್ರ ಹಣಕಾಸು ಇಲಾಖೆ ಯಾವೆಲ್ಲ ಬೇಡಿಕೆಗಳನ್ನು ಪೂರೈಸುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.

  • ಬೆಂಗಳೂರಲ್ಲಿ ಟ್ರಾಫಿಕ್​​​ ನಿವಾರಣೆಗೆ ಟನಲ್ ರಸ್ತೆಗೆ ಅನುದಾನ
  • ಹೆಬ್ಬಾಳದ ಎಸ್ಟೀಮ್ ಮಾಲ್​ನಿಂದ ಸಿಲ್ಕ್ ಬೋರ್ಡ್ ಜಂಕ್ಷನ್​​
  • ಉತ್ತರ-ದಕ್ಷಿಣ 18.5 ಕಿ.ಮೀ ಟನಲ್ ನಿರ್ಮಾಣಕ್ಕೆ ₹15 ಸಾವಿರ ಕೋಟಿ
  • ಕೆ.ಆರ್.ಪುರ ವೃತ್ತದಿಂದ ನಾಯಂಡನಹಳ್ಳಿ ಜಂಕ್ಷನ್ ಟನಲ್ ರಸ್ತೆ‘
  • 28.5 ಕಿ.ಮೀ ಟನಲ್ ರಸ್ತೆ ನಿರ್ಮಾಣಕ್ಕೆ ₹25 ಸಾವಿರ ಕೋಟಿ ವೆಚ್ಚ
  • ಟನಲ್ ರಸ್ತೆ, ಪೆರಿಫೆರಲ್ ರಿಂಗ್ ರಸ್ತೆ, ಡಬಲ್ ಡೆಕ್ಕರ್ ಮೇಲ್ಸೇತುವೆ
  • ಮೆಟ್ರೋ ರೈಲು ಮಾರ್ಗಗಳಿಗೆ 5 ಕಾರಿಡಾರು ವಿಸ್ತರಣೆಗೆ ಗುರುತು
  • 17 ಮೇಲ್ಸೇತುವೆ, ಬಫರ್ ವಲಯ ನಿರ್ಮಾಣಕ್ಕೆ ಅನುದಾನದ ಮನವಿ
  • ಬೆಂಗಳೂರಲ್ಲಿ ಮಳೆಯಿಂದಾಗುವ ಅವಘಡ ತಪ್ಪಿಸಲು ಯೋಜನೆ
  • 8 ಪಥಗಳ 73.04 ಕಿ.ಮೀ ಉದ್ದದ ಬಿಸಿನೆಸ್ ಕಾರಿಡಾರ್ ಯೋಜನೆ
  • ಕಾವೇರಿ 5ನೇ ಹಂತದ ಕುಡಿಯುವ ನೀರಿನ ಪೂರೈಕೆ ಮಾಡುವ ಯೋಜನೆ
  • ಹೆಚ್ಚುವರಿ ಬೇಡಿಕೆ ಪೂರೈಸಲು ಕಾವೇರಿ 6ನೇ ಹಂತದ ಯೋಜನೆ ಬೇಡಿಕೆ
- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!