ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಸಿಲಿನ ತಾಪಮಾನದಿಂದ ನಿಗಿ ನಿಗಿ ಕೆಂಡದಂತಿದ್ದ ಬೆಂಗಳೂರಿನಲ್ಲಿ ವರುಣನ ಕೃಪೆಯಿಂದ ಭೂಮಿ ತಂಪಾಗಿದೆ. ಆದರೆ, ಒಂದೇ ಮಳೆಗೆ ನಗರದಲ್ಲಿ ಸಾಲು ಸಾಲು ಸಮಸ್ಯೆಗಳು ಎದುರಾಗಿದ್ದು, ಹಲವು ಪ್ರದೇಶಗಳು ಜಲಾವೃತಗೊಂಡು ಮರ ಹಾಗೂ ವಿದ್ಯುತ್ ಕಂಬಗಳು ಬಿದ್ದಿರುವುದು ವರದಿಯಾಗಿದೆ.
ಏಪ್ರಿಲ್ 3 ರಂದು ನಗರದಲ್ಲಿ 7.2 ಮಿಮೀ ಮಳೆಯಾಗಿದ್ದು, ಇದರಿಂದ ಹಲವು ಸಮಸ್ಯೆಗಳು ಎದುರಾಗಿದೆ. ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು, ಮರಗಳು ಧರೆಗೆ ಉರುಳಿವೆ. ಇದರಿಂದಾಗಿ ಜನರಿಗೆ ಸಮಸ್ತೆ ಎದುರಾಗಿದೆ.
ಬಿಬಿಎಂಪಿ ಬಜೆಟ್ ನಲ್ಲಿ ಸ್ಕೈಡೆಕ್, ಸುರಂಗ ರಸ್ತೆಗಳು ಮತ್ತು ಡಬಲ್ ಡೆಕ್ಕರ್ ಫ್ಲೈಓವರ್ಗಳಂತಹ ಬೃಹತ್ ಯೋಜನೆಗಳನ್ನು ಪಟ್ಟಿ ಮಾಡಲಾಗಿದೆ. ಇದಕ್ಕಾಗಿ ಕೋಟ್ಯಾಂತರ ರೂಪಾಯಿಗಳನ್ನು ಮೀಸಲಿಡಲಾಗಿದೆ. ಆದರೆ, ಕೆಲವೇ ಲಕ್ಷ ರೂಪಾಯಿ ವೆಚ್ಚದಲ್ಲಿ ಸರಿಪಡಿಸಬಹುದಾದ ಸಮಸ್ಯೆಗಳನ್ನು ನಿರ್ಲಕ್ಷಿಸಲಾಗಿದೆ. ಬಜೆಟ್ ನಲ್ಲಿ ಚರಂಡಿ, ರಾಜಕಾಲುವೆ, ಮಳೆನೀರು ಕೊಯ್ಲು ಕುರಿತು ಯಾವುದೇ ಉಲ್ಲೇಖವಿಲ್ಲ ಎಂದು ಜನ ಗರಂ ಆಗಿದ್ದಾರೆ.