ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಅಕ್ರಮ ಸಂಬಂಧಗಳು ವೈವಾಹಿಕ ಜೀವನವನ್ನು ಹಾಳು ಮಾಡುತ್ತಿವೆ. ವಿವಾಹೇತರ ಸಂಬಂಧಗಳಿಗಾಗಿ ಜನ ಆಪ್‌ಗಳ ಮೊರೆ ಹೋಗಿದ್ದಾರೆ.
ವಿವಾಹೇತರ ಸಂಬಂಧ ಬೆಸೆಯುವ ಗ್ಲೀಡನ್ ಆ್ಯಪ್‌ನಲ್ಲಿ 30 ಲಕ್ಷಕ್ಕೂ ಹೆಚ್ಚು ಭಾರತೀಯರು ನೊಂದಾಯಿಸಿಕೊಂಡಿದ್ದು ಅದರಲ್ಲೂ ಬೆಂಗಳೂರು ಮೊದಲ ಸ್ಥಾನದಲ್ಲಿದೆ.
ಗ್ಲೀಡನ್ ಬಳಕೆದಾರರ ಸಂಖ್ಯೆಯಲ್ಲಿ ಬೆಂಗಳೂರು 20% ಬಳಕೆದಾರರನ್ನು ಹೊಂದುವ ಮೂಲಕ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಮುಂಬೈ(19%), ಕೋಲ್ಕತ್ತಾ (18%), ದೆಹಲಿ (15%) ಇದೆ. ಬಳಕೆದಾರರ ಪೈಕಿ 58% ರಷ್ಟು ಮಂದಿ ಮಹಿಳೆಯರಿದ್ದಾರೆ. ಇವರು ಸುಮಾರು 45 ನಿಮಿಷಗಳ ಕಾಲ ಈ ಆ್ಯಪ್‌ನಲ್ಲಿ ಸಮಯ ಕಳೆಯುತ್ತಿದ್ದಾರೆ. ಎಲ್ಲಾ ವಯಸ್ಸಿನ ಪುರುಷರು ಮತ್ತು ಮಹಿಳೆಯರು ಈ ಅಪ್ಲಿಕೇಶನ್ ಬಳಸುತ್ತಿದ್ದಾರೆ.
ಮೆಟ್ರೋ ನಗರಗಳು ಗರಿಷ್ಠ ಬಳಕೆದಾರರನ್ನು ಹೊಂದಿದ್ದರೂ ಭೋಪಾಲ್, ವಡೋದರಾ ಮತ್ತು ಕೊಚ್ಚಿಯಂತಹ ಸಣ್ಣ ನಗರಗಳಿಂದ ಬಳಕೆದಾರರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ ಎಂದು ವರದಿ ತಿಳಿಸಿದೆ. ಮುಂದಿನ ದಿನಗಳಲ್ಲಿ ಗ್ಲೀಡನ್ ಭಾರತದಲ್ಲಿ 50 ಲಕ್ಷ ಗ್ರಾಹಕರನ್ನು ತಲುಪುವ ಗುರಿಯನ್ನು ಹಾಕಿಕೊಂಡಿದೆ.