ಭಾರತ G20 ನಾಯಕತ್ವ ವಹಿಸಿದ ಬಳಿಕ ಮೊದಲ ಸಭೆ ಬೆಂಗಳೂರಿನಲ್ಲಿ ಆಯೋಜನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
G-20 ರಾಷ್ಟ್ರಗಳ ನಾಯಕತ್ವನ್ನು ಭಾರತ ವಹಿಸಿಕೊಂಡ ಬಳಿಕ ನಡೆಯುತ್ತಿರುವ ಮೊದಲ ಹಣಕಾಸು ಸಭೆಗೆ ಬೆಂಗಳೂರು ಆತಿಥ್ಯ ವಹಿಸಲಿದೆ. ಮೊದಲ G20 ಹಣಕಾಸು ಮತ್ತು ಸೆಂಟ್ರಲ್ ಬ್ಯಾಂಕ್ ಡೆಪ್ಯೂಟೀಸ್ ಮೀಟಿಂಗ್ ಬೆಂಗಳೂರಿನಲ್ಲಿ ಡಿಸೆಂಬರ್ 13-15 2022 ರಂದು ನಡೆಯಲಿದೆ ಎಂದು ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಅಜಯ್ ಸೇಠ್ ಅವರು ತಿಳಿಸಿದ್ದಾರೆ.
ಇದೊಂದು ರೋಚಕ ಕ್ಷಣ ಎಂದು ಸೇಠ್ ಹೇಳಿದ್ದಾರೆ. ಭಾರತದ G20 ಪ್ರೆಸಿಡೆನ್ಸಿ ಅಡಿಯಲ್ಲಿ G20 ಹಣಕಾಸು ವ್ಯವಹಾರಗಳ ಮೊದಲ ಸಭೆಯನ್ನು ಬೆಂಗಳೂರು ಆಯೋಜಿಸಲಿದೆ. ಹೈಟೆಕ್ ಉದ್ಯಮಕ್ಕೆ ಹೆಸರುವಾಸಿಯಾಗಿರುವ ಭಾರತದ ಅತ್ಯುತ್ತಮ ಮೆಟ್ರೋಪಾಲಿಟನ್ ನಗರಗಳಲ್ಲಿ ಒಂದಾರಗಿರುವ ಬೆಂಗಳೂರಿನಿಂದ ನಾವು ಹಣಕಾಸಿಗೆ ಸಂಬಂಧಿಸಿದ ಸಭೆಗಳನ್ನು ಪ್ರಾರಂಭಿಸುತ್ತಿದ್ದೇವೆ.
“G20 ರಾಷ್ಟ್ರಗಳ ನಡೆವೆ ನಡೆಯಲಿರುವ ಚರ್ಚೆಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ಪರಿಣಾಮಕಾರಿ ಪ್ರಭಾವ ಬೀರುತ್ತವೆ. G20 ಸದಸ್ಯರಲ್ಲದೆ, ನಾವು ಹಲವಾರು ಇತರ ದೇಶಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳನ್ನು ಈ ಸಭೆಗೆ ಆಹ್ವಾನಿಸಿದ್ದೇವೆ” ಎಂದು ಅವರು ಹೇಳಿದ್ದಾರೆ. ಭಾರತವು ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆಯಾಗಿ ಸಾಗುತ್ತಿರುವ ಈ ಸಂದರ್ಬದಲ್ಲಿಯೇ ಪ್ರಮುಖ ಜಾಗತಿಕ ಆರ್ಥಿಕ ಗುಂಪಿಗೆ ಒಂದು ವರ್ಷ ಚುಕ್ಕಾಣಿ ಹಿಡಿಯುವ ಅವಕಾಶವು ಒದಗಿಬಂದಿದೆ ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!