June 2, 2026
Tuesday, June 2, 2026
spot_img

ಬೆಂಗಳೂರಿನಲ್ಲಿ ಈ ರೀತಿ ಮಳೆ ಬಿದ್ದು 25 ವರ್ಷಗಳೇ ಆಗಿತ್ತು! ರಸ್ತೆಗಳೆಲ್ಲಾ ಬ್ಲಾಕ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಿಸಿಲಿನಿಂದ ಬೆಂದು ಕಾದ ಹೆಂಚಿನಂತಾಗಿದ್ದ ಬೆಂಗಳೂರು ಇದೀಗ ಧಾರಾಕಾರ ಮಳೆಗೆ ಪತರುಗುಟ್ಟಿದೆ.

ಒಂದೇ ಒಂದು ಬೇಸಿಗೆ ಮಳೆಗೆ ರಾಜಧಾನಿ ಬೆಂಗಳೂರು ನೆಂದು ಹೋಗಿದ್ದು, ಸಿಕ್ಕಾಪಟ್ಟೆ ಅವಾಂತರಗಳು ಸೃಷ್ಟಿಯಾಗಿವೆ. ಬೆಂಗಳೂರು ಅಷ್ಟು ದೊಡ್ಡದಾಗಿದ್ದು, ಒಂದು ಏರಿಯಾಗೆ ಮಳೆ ಬಂದ್ರೆ ಇನ್ನೊಂದು ಏರಿಯಾಗೆ ಮಳೆ ಬರೋದಿಲ್ಲ. ಆದರೆ ನಿನ್ನೆ ಎಲ್ಲ ಏರಿಯಾಗಳಲ್ಲಿಯೂ ಅತಿಯಾದ ಮಳೆ ಬಿದ್ದಿದೆ. ಅದರಲ್ಲಿಯೂ ಸಿಟಿಯ ಮುಖ್ಯ ರಸ್ತೆಗಳಲ್ಲಿ ಆಲಿಕಲ್ಲು ಮಳೆ ಬಿದ್ದಿದೆ. ಇದು 25 ವರ್ಷಗಳಲ್ಲಿ ಸುರಿದ ದಾಖಲೆಯ ಮಳೆಯಾಗಿದೆ.

ವಿಧಾನಸೌಧ, ಪೊಲೀಸ್‌ ಕಮಿಷನರ್‌ ಕಚೇರಿ, ಇನ್ಫೆಂಟ್ರಿ ರೋಡ್‌, ಲ್ಯಾವೆಲ್‌ ರೋಡ್‌, ಶಿವಾಜಿನಗರ್‌, ರಿಚ್‌ಮಂಡ್‌ ಸರ್ಕಲ್‌ ಇನ್ನಿತರ ಕಡೆ ಆಲಿಕಲ್ಲು ಸಹಿತ ಮಳೆ ಬಿದ್ದಿದೆ.

ಇನ್ನು ಮಳೆಯಿಂದಾಗಿ ಮತ್ತೆ ಬೆಂಗಳೂರು ಮಳೆಗಾಲದ ಫೀಲ್‌ ತೆಗೆದುಕೊಂಡಿದೆ. ಸುಮ್ಮನಹಳ್ಳಿ ಫ್ಲೈ ಓವರ್‌ ಮೇಲೆ ಸರಣಿ ಅಪಘಾತವಾಗಿದೆ. ಈ ಅಪಘಾತದಲ್ಲಿ ಏಳೆಂಟು ವಾಹನಗಳಿಗೆ ಹಾನಿಯಾಗಿದೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಂಗಳೂರು ನಗರದಲ್ಲಿ 170 ಮರಗಳು ನೆಲಕ್ಕೆ ಉರುಳಿವೆ. 68 ಕಡೆ ನೀರು ಬ್ಲಾಕ್‌ ಆಗಿದ್ದು, ಏರಿಯಾಗಳು ಜಲಾವೃತ ಆಗಿವೆ.

ಶಿವಾಜಿನಗರದ ಬೌರಿಂಗ್‌ ಆಸ್ಪತ್ರೆ ಬಳಿ ಗೋಡೆ ಕುಸಿದು ಬಿದ್ದಿದ್ದು, ಇಬ್ಬರು ಮಕ್ಕಳು ಸೇರಿ ಏಳು ಮಂದಿ ಮೃತಪಟ್ಟಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !