ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಿಂದ ಪ್ರವಾಸಕ್ಕೆಂದು ಬಂದಿದ್ದ ಯುವಕನೊರ್ವ ಜೋಗ ಜಲಪಾತದ ಬಳಿ ಕಣ್ಮರೆಯಾಗಿದ್ದಾನೆ. ಯುವಕನಿಗಾಗಿ ಕಳೆದ 6 ದಿನಗಳಿಂದ ಶೋಧಕಾರ್ಯ ನಡೆಯುತ್ತಿದೆ.
ಗದಗ ಮೂಲದ ಆನಂದ್ (24) ನಾಪತ್ತೆಯಾಗಿರುವ ಯುವಕ. ಬೆಂಗಳೂರಿನಲ್ಲಿ ಟೀ ಅಂಗಡಿ ನಡೆಸುತ್ತಿದ್ದ ಈ ಯುವಕ ಜೋಗ ಜಲಪಾತ ನೋಡಲೆಂದು ಇದೇ ಜುಲೈ 15ರಂದು ಜಲಪಾತದ ಬಳಿ ಆಗಮಿಸಿದ್ದನು. ಯಾತ್ರಿ ನಿವಾಸದ ಸೀತಾಕಟ್ಟೆ ಸೇತುವೆ ಬಳಿಯಿಂದ ಬೇಲಿ ದಾಟಿ, ಜಲಪಾತದ ಬಳಿ ಹೋಗಿದ್ದನು. ಆದರೆ ಅಂದಿನಿಂದ ಯುವಕ ನಾಪತ್ತೆಯಾಗಿದ್ದಾನೆ.
ಬ್ಯಾಗ್ ಮಾತ್ರ ಸಿಕ್ಕಿದ್ದು ಯುವಕ ಮಾತ್ರ ಎಲ್ಲಿದ್ದಾನೆ ಎಂದು ತಿಳಿದು ಬಂದಿಲ್ಲ.ಕಾರ್ಗಲ್ ಠಾಣೆ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ಜಲಪಾತದ ಬಳಿ ಯುವಕನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಜೋಗ ಜಲಪಾತದ ಬಳಿ ಬೀಳುತ್ತಿರುವ ಭಾರೀ ಮಳೆ ಹಾಗೂ ಮಂಜು ಮುಸುಕಿದ ವಾತಾವರಣ ಕೆಲಸಕ್ಕೆ ಅಡ್ಡಿ ಆಗುತ್ತಿದೆ. ಕಳೆದ 6 ದಿನಳಿಂದ ಈ ಹುಡುಕಾಟ ನಡೆಸಲಾಗುತ್ತಿದೆ.