ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ವಾಹನ ಸಂಚಾರ ದಟ್ಟಣೆ ಕಡಿಮೆ: ಶೇ.32ರಷ್ಟು ಇಳಿಕೆಯಾದ ಟ್ರಾಫಿಕ್- ವರದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸಿಲಿಕಾನ್‌ ಸಿಟಿ ಬೆಂಗಳೂರು ವಾಹನ ದಟ್ಟಣೆ, ಟ್ರಾಫಿಕ್‌ ಜಾಮ್‌ ಗೆ ಹೆಸರಯವಾಸಿ. ಆದರೆ ಇದೇ ಬೆಂಗಳೂರಿನಲ್ಲಿ ಕಳೆದ ವರ್ಷ (2021)ದಲ್ಲಿ ಶೇ.32ರಷ್ಟು ಸಂಚಾರ ದಟ್ಟಣೆ ಕಡಿಮೆಯಾಗಿದೆ ಎಂದು ವರದಿ ತಿಳಿಸಿದೆ.
ಈ ಬಗ್ಗೆ ಭೌಗೋಳಿಕ ಪ್ರದೇಶ ತಂತ್ರಜ್ಞಾನ ತಜ್ಞ ಸಂಸ್ಥೆ ಟಾಮ್‌ ಟಾಮ್‌ ವರದಿ ಮಾಡಿದ್ದು, ಬೆಂಗಳೂರಿನಲ್ಲಿ ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ 2021ರಲ್ಲಿ ವಾಹನ ದಟ್ಟಣೆ ಕಡಿಮೆಯಾಗಿದೆ.
2017ರಲ್ಲಿ ಶೇ.71ರಷ್ಟಿದ್ದ ವಾಹನ ದಟ್ಟಣೆ ಈ ವರ್ಷ ಶೇ.48ಕ್ಕೆ ಇಳಿದಿದೆ ಅಂದರೆ ಶೇ.32ರಷ್ಟು ಸಂಚಾರ ದಟ್ಟಣೆ ಕಡಿಮೆಯಾಗಿದೆ. ಇನ್ನು ಮುಂಬೈ ನಲ್ಲಿ ಶೇ.18ರಷ್ಟು, ದೆಹಲಿಯಲ್ಲಿ ಶೇ.14ರಷ್ಟು, ಪುಣೆಯಲ್ಲಿ ಶೇ.29ರಷ್ಟು ವಾಹನ ದಟ್ಟಣೆ ಕಡಿಮೆಯಾಗಿದೆ ಎಂದು ವರದಿ ತಿಳಿಸಿದೆ.
ಬೆಂಗಳೂರಿನ ಸಂಚಾರ ದಟ್ಟಣೆ ಶೇ.32ರಷ್ಟು ಕಡಿಮೆಯಾಗಿದ್ದು, 2019ರಲ್ಲಿದ್ದ 6ನೇ ಸ್ಥಾನದಿಂದ ಈಗ 2021ರಲ್ಲಿ 10ನೇ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಈ ವೇಳೆ ರಾಷ್ಟ್ರರಾಜಧಾನಿ ದೆಹಲಿಗೆ 11ನೇ ಸ್ಥಾನ, ಮುಂಬೈ ಗೆ 5ನೇ ಸ್ಥಾನ ಹಾಗೂ ಮಹಾರಾಷ್ಟ್ರದ ಪುಣೆ ನಗರಕ್ಕೆ 21ನೇ ಸ್ಥಾನ ಸಿಕ್ಕಿದೆ.
ಬಹುತೇಕ ಖಾಸಗಿ ಕಂಪನಿಗಳು, ಶಾಲಾ ಕಾಲೇಜುಗಳು ವರ್ಕ್‌ ಫ್ರಂ ಹೋಂ ಹಾಗೂ ಆನ್‌ ಲೈನ್‌ ಆಗಿರುವುದರಿಂದ ವಾಹನ ದಟ್ಟಣೆ ಕಡಿಮೆಯಾಗಲೂ ಕಾರಣವಾಗಿದೆ ಎಂದು ತಿಳಿಸಿದೆ.
ಎಲೆಕ್ಟ್ರಿಕ್‌ ಬೈಕ್‌ ಬಳಕೆ ಹೆಚ್ಚು: ಎಷ್ಟೇ ವಾಹನ ದಟ್ಟಣೆ ಕಡಿಮೆಯಾದರೂ ಜನರು ತಮ್ಮ ಖಾಸಗಿ ವಾಹನ ಖರೀದಿಯನ್ನು ಹೆಚ್ಚಿಸಿದ್ದಾರೆ. ಅದರಲ್ಲೂ ಈ ಬಾರಿ ಎಲೆಕ್ಟ್ರಿಕ್‌ ವಾಹನಗಳ ಮೊರೆ ಹೋಗಿದ್ದಾರೆ. 2021ರಲ್ಲಿ ಬರೋಬ್ಬರಿ 22,264 ಎಲೆಕ್ಟ್ರಿಕ್‌ ವಾಹನಗಳು ನೋಂದಣಿಯಾಗಿದ್ದು, 2018ರಲ್ಲಿ ಈ ಪ್ರಮಾಣ ಕೇವಲ 3,806 ಇತ್ತು.
ಟಾಮ್‌ ಟಾಮ್‌ ಸಂಸ್ಥೆ ವಿಶ್ವದ 58 ರಾಷ್ಟ್ರಗಳ 404 ನಗರಗಳ ಟ್ರಾಫಿಕ್‌ ಟ್ರೆಂಡ್‌ ಗಳನ್ನು ಪ್ರತಿ ವರ್ಷ ಬಿಡುಗಡೆ ಮಾಡುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!