ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ತಂಡದ ಬೌಲರ್ಗಳು ಲಯಬದ್ಧ ಬೌಲಿಂಗ್ ಪ್ರದರ್ಶನದಿಂದ ಡೆಲ್ಲಿ ತಂಡ 162 ರನ್ಗಳ ಸಾಧಾರಣ ಮೊತ್ತ ಗಳಿಸಿದೆ.
ಡೆಲ್ಲಿ ಕ್ಯಾಪಿಟಲ್ಸ್ ಪರ ಕೆಎಲ್ ರಾಹುಲ್ 41, ಟ್ರಿಸ್ಟಾನ್ ಸ್ಟಬ್ಸ್ 34 , ಅಭಿಷೇಕ್ ಪೊರೆಲ್ 28 ರನ್ಗಳಿಸಿದರು.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಡೆಲ್ಲಿ , ನಿರೀಕ್ಷಿತ ಆರಂಭ ಪಡೆಯುವಲ್ಲಿ ವಿಫಲವಾಯಿತು. ಅಭಿಷೇಕ್ ಪೊರೆಲ್ ಸ್ಫೋಟಕ ಆಟಕ್ಕೆ ಯತ್ನಿಸಿ 28 ರನ್ಗಳಿಸಿ ಪವರ್ ಪ್ಲೇನಲ್ಲೇ ಹ್ಯಾಜಲ್ವುಡ್ಗೆ ವಿಕೆಟ್ ಒಪ್ಪಿಸಿದರು. ಗಾಯದಿಂದ ಚೇತರಿಸಿಕೊಂಡು ಬಂದಿದ್ದ ಫಾಫ್ ಡುಪ್ಲೆಸಿಸ್ 22 ರನ್ಗಳಿಸಿ ಕೃನಾಲ್ ಪಾಂಡ್ಯ ಬೌಲಿಂಗ್ನಲ್ಲಿ ಕೊಹ್ಲಿಗೆ ಕ್ಯಾಚ್ ನೀಡಿ ಔಟ್ ಆದರು. ಕರುಣ್ ನಾಯರ್ ಕೇವಲ 4 ರನ್ಗಳಿಸಿ ದಯಾಳ್ ಬೌಲಿಂಗ್ನಲ್ಲಿ ಭುವನೇಶ್ವರ್ಗೆ ಕ್ಯಾಚ್ ನೀಡಿದರು.
ಕೆಎಲ್ ರಾಹುಲ್ 39 ಎಸೆತಗಳಲ್ಲಿ 3 ಬೌಂಡರಿ ಸಹಿತ 41 ರನ್ಗಳಿಸಿ ನಿರ್ಣಾಯಕ ಹಂತದಲ್ಲಿ ವಿಕೆಟ್ ಒಪ್ಪಿಸಿದರು. ನಾಯಕ ಅಕ್ಷರ್ ಪಟೇಲ್ ಆಟ ಕೇವಲ 15ಕ್ಕೆ ಅಂತ್ಯವಾಯಿತು. ಕೊನೆಯಲ್ಲಿ ಅಬ್ಬರಿಸಿದ ಟ್ರಿಸ್ಟಾನ್ ಸ್ಟಬ್ಸ್ 18 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಿತ 34 ರನ್ಗಳಿಸಿದರು. ಅಶುತೋಷ್ ಶರ್ಮಾ 2 ರನ್, ವಿಪ್ರಜ್ ನಿಗಂ 12 ರನ್ಗಳಿಸಿದರು.