ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್ ಉಗ್ರರ ದಾಳಿ ಬಳಿಕ ಕೇಂದ್ರ ಸರ್ಕಾರ ಭಾರತದಲ್ಲಿರುವ ಪಾಕ್ ವಾಸಿಗಳಿಗೆ ದೇಶ ತೊರೆಯುವಂತೆ ಖಡಕ್ ಸೂಚನೆ ನೀಡಲಾಗಿದೆ. ಇದರ ಬೆನ್ನಲ್ಲೇ ಪಾಕಿಸ್ತಾನಿಯರು ಭಾರತ ತೊರೆಯುತ್ತಿದ್ದಾರೆ.
ಆದ್ರೆ ಪ್ರೀತಿಯನ್ನು ಅರಸಿ ಭಾರತಕ್ಕೆ ಬಂದಿರುವ ಸೀಮಾ ಹೈದರ್ ಯಾವುದೇ ಕಾರಣಕ್ಕೂ ಪಾಕಿಸ್ತಾನಕ್ಕೆ ಹಿಂದಿರುಗಲ್ಲ ಎಂದು ಹಠ ಹಿಡಿದಿದ್ದು, ಬೇಕಿದ್ರೆ ಇಲ್ಲಿಯೇ ಸಾಯುತ್ತೇನೆಯೇ ವಿನಃ ಪಾಕಿಸ್ತಾನಕ್ಕೆ ಹೋಗಲ್ಲ ಎಂದು ಹೇಳುತ್ತಿದ್ದಾರೆ.
ಇತ್ತೀಚೆಗೆ ಸೀಮಾ ಹೈದರ್ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಮಾತನಾಡಿರುವ ಸೀಮಾ ಹೈದರ್, ನನಗೆ ಪಾಕಿಸ್ತಾನಕ್ಕೆ ಹೋಗಲು ಇಷ್ಟವಿಲ್ಲ . ನಾನು ಪಾಕಿಸ್ತಾನದ ಮಗಳು, ಆದ್ರೀಗ ನಾನು ಭಾರತದ ಸೊಸೆಯಾಗಿದ್ದೇನೆ. ನಾನು ಭಾರತದ ಆಶ್ರಯದಲ್ಲಿದ್ದೇನೆ. ಹಾಗಾಗಿ ಭಾರತದಲ್ಲಿರಲು ನನಗೆ ಅನುಮತಿ ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಯೋಗಿ ಆದಿತ್ಯನಾಥ್ ಅವರ ಬಳಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾಳೆ.
ಸೀಮ್ ಹೈದರ್ ಹೇಳಿಕೆಯ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಇದರಲ್ಲಿ ನಾನು ಪಾಕಿಸ್ತಾನಕ್ಕೆ ಹಿಂದಿರುಗುತ್ತೇನೆ ಎಂಬ ಕಲ್ಪನೆಯನ್ನು ನೀವು ಮಾಡಿಕೊಳ್ಳಬೇಡಿ. ನಾನು ಇಲ್ಲಿಯೇ ಸಾಯುತ್ತೇನೆಯೇ ವಿನಃ ಪಾಕ್‌ಗೆ ಹೋಗಲ್ಲ. ನನ್ನ ಜೀವನದ ಅಂತ್ಯ ಇಲ್ಲಿಯೇ ಆಗುತ್ತೆ. ನಾನು ಯಾರ ಪಾಕಿಸ್ತಾನಿಗಳ ಹೆಸರು ಹೇಳಲು ಮತ್ತು ಕೇಳಲು ಇಷ್ಟಪಡಲ್ಲ ಎಂದು ಹೇಳಿದ್ದಾಳೆ. ಸದ್ಯ ಈ ವಿಡಿಯೋದ ತುಣುಕುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
2023ರಲ್ಲಿ ಸೀಮಾ, ತನ್ನ ನಾಲ್ಕು ಮಕ್ಕಳ ಜೊತೆಗೆ ಭಾರತಕ್ಕೆ ಆಗಮಿಸಿ ಯುಪಿ ಮೂಲದ ಸಚಿನ್ ಮೀನಾರನ್ನು ವರಿಸಿದ್ದರು.