ಬೆಂಗಳೂರು: ಗಣರಾಜ್ಯೋತ್ಸವ ಪೆರೇಡ್‌ ಸಿದ್ಧತೆ ಪರಿಶೀಲಿಸಿದ ಲೆಫ್ಟಿನೆಂಟ್ ಜನರಲ್ ಎ.ಕೆ. ಸಿಂಗ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಜನವರಿ 15 ರಂದು ಬೆಂಗಳೂರು ನಗರದಲ್ಲಿ ನಡೆಯಲಿರುವ ಸೇನಾ ದಿನಾಚರಣೆ ಪರೇಡ್‌ನ ಸಿದ್ಧತೆಗಳನ್ನು ಪರಿಶೀಲಿಸಲು ದಕ್ಷಿಣ ಕಮಾಂಡ್‌ನ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಎ.ಕೆ. ಸಿಂಗ್ ಅವರು  ಬೆಂಗಳೂರು ಮಿಲಿಟರಿ ಠಾಣೆಗೆ ಭೇಟಿ ನೀಡಿದರು.
1949 ರ ನಂತರ ಮೊದಲ ಬಾರಿಗೆ ದೆಹಲಿಯ ಹೊರಗೆ ಪರೇಡ್‌ಗೆ ನಡೆಯುತ್ತಿದೆ. ಇದು ಬೆಂಗಳೂರಿಗೆ ಒಲಿದಿರುವುದು ಹೆಗ್ಗಳಿಕೆಯಾಗಿದೆ. ಈ ಸಂಬಂಧ ಸೇನಾ ಕಮಾಂಡರ್ ಅವರು ಪರೇಡ್, ಎಂಇಜಿ ಮತ್ತು ಸೆಂಟರ್ ಡ್ರಿಲ್ ಸ್ಕ್ವೇರ್ ಮತ್ತು ಇತರ ಸ್ಥಳಗಳನ್ನು ತಮ್ಮ ಭೇಟಿಯ ಸಮಯದಲ್ಲಿ ಪರಿಶೀಲಿಸಿದರು.
ಸೇನಾ ಕಮಾಂಡರ್ ಜೊತೆಯಲ್ಲಿ ಲೆಫ್ಟಿನೆಂಟ್ ಜನರಲ್ ಎ.ಅರುಣ್, ಜನರಲ್ ಆಫೀಸರ್, ದಕ್ಷಿಣ ಭಾರತ್ ಏರಿಯಾ, ಚೆನ್ನೈನ ಕಮಾಂಡಿಂಗ್ ಇದ್ದರು.
ನಂತರ, ಸೇನಾ ಕಮಾಂಡರ್ ಅವರು ಬೆಂಗಳೂರಿನ ಎಎಸ್‌ಸಿ ಸೆಂಟರ್ ಮತ್ತು ಕಾಲೇಜಿಗೆ ಭೇಟಿ ನೀಡಿದರು, ಅಲ್ಲಿ ಅವರಿಗೆ ಕಾಲೇಜಿನ ಕಮಾಂಡೆಂಟ್ ಅವರು ಕೇಂದ್ರದಲ್ಲಿ ಮಾಡಿದ ತಾಂತ್ರಿಕ ಪ್ರಗತಿಗಳ ಕುರಿತು ವಿವರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!