ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಧಿಕಾರಕ್ಕೆ ಮರಳಿದ ನಂತರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.
ಹಮಾಸ್ ಉಗ್ರಗಾಮಿ ಗುಂಪಿನ ಮೇಲೆ ಒತ್ತಡ ಹೇರಲು ಗಾಜಾದಾದ್ಯಂತ ಹೊಸ ಭದ್ರತಾ ಕಾರಿಡಾರ್‌ನಲ್ಲಿ ಇಸ್ರೇಲ್ ಸೇನೆಯನ್ನು ನಿಯೋಜಿಸಿದ್ದು, ಇದರ ಬೆನ್ನಲ್ಲೇ ಈ ಭೇಟಿ ನಡೆಯುತ್ತಿದೆ.
ನೆತನ್ಯಾಹು ಮತ್ತು ಟ್ರಂಪ್ ಸುಂಕದ ವಿಷಯ, ನಮ್ಮ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಪ್ರಯತ್ನಗಳು, ಇಸ್ರೇಲ್-ಟರ್ಕಿ ಸಂಬಂಧಗಳು, ಇರಾನಿನ ಬೆದರಿಕೆ ಮತ್ತು ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದ ವಿರುದ್ಧದ ಹೋರಾಟದ ಕುರಿತು ಚರ್ಚಿಸಲಿದ್ದಾರೆ ಎಂದು ನೆತನ್ಯಾಹು ಅವರ ಕಚೇರಿಯು ಹೇಳಿಕೆ ಪ್ರಕಟಿಸಿದೆ.