ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡದ ಬಹುನಿರೀಕ್ಷಿತ ಕಿರುತೆರೆಯ ಶೋ ಬಿಗ್‌ಬಾಸ್ ಕನ್ನಡದ 11 ನೇ ಸೀಸನ್ ನ ಮೊದಲ ಪ್ರೋಮೋ ರಿಲೀಸ್ ಆಗಿದೆ.
ಕಣ್ಣಿನ ಲೋಗೋ ಆಕರ್ಷಕವಾಗಿ ಮೂಡಿ ಬಂದಿದೆ. ಬೆಂಕಿ ಮತ್ತು ನೀರಿನ ಸಮ್ಮಿಲನವಾಗಿ ಬಿಗ್‌ಬಾಸ್ ಕಣ್ಣು ಕಾಣುತ್ತಿದ್ದು, ಬೆಂಕಿ-ನೀರು ಸಮ್ಮಿಲನವಾದಾಗ ಗುಡುಗು ಮಿಂಚಿನ ಸದ್ದಿನ ಜೊತೆಗೆ ಬೆಂಕಿನ ಕಿಡಿಗಳು ಹಾರುವುದು ಕಾಣಿಸುತ್ತಿದೆ. ಹೀಗಾಗಿ ಹಿಂದಿನ ಎಲ್ಲಾ ಸೀಸನ್ ಗಳಿಂದ ಈ ಬಾರಿ ಭಾರೀ ದೊಡ್ಡ ಮಟ್ಟದಲ್ಲಿ ಶೋ ನಡೆಯಲಿದೆ ಎಂಬುದು ಕಾಣುತ್ತಿದೆ.
https://www.facebook.com/watch/?v=483871504571589&t=8
ಇನ್ನು ಕಿಚ್ಚ ಸುದೀಪ್ ಅವರೇ ಈ ಬಾರಿ ಕೂಡ ನಿರೂಪಣೆ ಮಾಡಲಿದ್ದಾರೆ ಎಂಬುದು ಪಕ್ಕಾ ಆಗಿದೆ. ಯಾಕೆಂದರೆ ಪ್ರೋಮೋ ರಿಲೀಸ್ ಮಾಡುವಾಗ ಕಿಚ್ಚ ಸುದೀಪ ಎಂಬ ಹ್ಯಾಶ್ ಟ್ಯಾಗ್ ಬಳಸಲಾಗಿದೆ. ಈ ಮೂಲಕ ಶೋ ನಡೆಸುವವರು ಕಿಚ್ಚನೇ ಈ ಬಾರಿ ಕಾರ್ಯಕ್ರಮ ನಡೆಸಬಲ್ಲ ನಿರೂಪಕ ಎಂಬ ಸುಳಿವು ಬಿಟ್ಟು ಕೊಟ್ಟಿದ್ದಾರೆ.
ಈ ಮೂಲಕ ಇಂದಿನಿಂದಲೇ ಬಿಗ್ ಬಾಸ್ ಕಾವನ್ನು ಹೆಚ್ಚಿಸಿದೆ ಕಲರ್ಸ್ ಕನ್ನಡ ಇನ್ನು ಕಿಚ್ಚ ಸುದೀಪ್ ಅವರಿರುವ ಪ್ರೋಮೋ ಯಾವಾಗ ರಿಲೀಸ್ ಆಗಲಿದೆ ಎಂಬುದನ್ನು ವೀಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಜಸ್ಟ್ ಮೊದಲ ಪ್ರೋಮೋ ರಿಲೀಸ್ ಆಗಿದ್ದು, ಅನೇಕರು ಕಾತುರದಿಂದ ಕಾಯುತ್ತಿದ್ದೇವೆ ಎಂದು ಕಮೆಂಟ್ ಮಾಡಿದ್ದಾರೆ