August 20, 2026
Thursday, August 20, 2026
spot_img

ಫಿಟ್ ಆಗಿರಲು ಬಯಸುವವರಿಗೆ ಬೆಸ್ಟ್ ಆಪ್ಷನ್: ಕ್ಯಾಲೋರಿ ಕಡಿಮೆ ಇರುವ ಗೆಣಸಿನ ಸೂಪ್ ಇಲ್ಲಿದೆ

ಫಿಟ್ ಆಗಿರಬೇಕು, ತೂಕ ಇಳಿಸಬೇಕು ಅಂತ ಡಯಟ್ ಮಾಡ್ತಿದ್ದೀರಾ? ಹಾಗಾದ್ರೆ ಪ್ರತಿದಿನ ಅದೇ ಬೋರಿಂಗ್ ಆಹಾರ ತಿನ್ನಬೇಡಿ. ಕಡಿಮೆ ಕ್ಯಾಲೋರಿ ಇರೋ, ಈ ಸೂಪರ್ ಟೇಸ್ಟಿ ಸ್ವೀಟ್ ಪೊಟಾಟೊ ಸೂಪ್ ಒಮ್ಮೆ ಮಾಡಿ ನೋಡಿ. ಇದನ್ನು ಕಡಿಮೆ ಸಮಯದಲ್ಲಿ ಸುಲಭವಾಗಿ ಮಾಡಬಹುದು.

ಬೇಕಾಗುವ ಸಾಮಗ್ರಿಗಳು:

ಗೆಣಸು

ಈರುಳ್ಳಿ

ಬೆಳ್ಳುಳ್ಳಿ

ಶುಂಠಿ

ಬೆಣ್ಣೆ ಅಥವಾ ಎಣ್ಣೆ

ಕಾಳುಮೆಣಸಿನ ಪುಡಿ

ನೀರ ಮತ್ತು ಉಪ್ಪು

ಫ್ರೆಶ್ ಕ್ರೀಮ್ ಅಥವಾ ತೆಂಗಿನ ಹಾಲು

ಮಾಡುವ ವಿಧಾನ

ಒಂದು ಪಾತ್ರೆಯಲ್ಲಿ ಬೆಣ್ಣೆ ಅಥವಾ ಎಣ್ಣೆಯನ್ನು ಬಿಸಿ ಮಾಡಿ. ಅದಕ್ಕೆ ಕತ್ತರಿಸಿದ ಬೆಳ್ಳುಳ್ಳಿ, ಶುಂಠಿ ಮತ್ತು ಈರುಳ್ಳಿ ಹಾಕಿ 2 ನಿಮಿಷ ಹುರಿದು, ನಂತರ ಕತ್ತರಿಸಿದ ಗೆಣಸಿನ ತುಂಡುಗಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಪಾತ್ರೆಗೆ ನೀರು ಮತ್ತು ಸ್ವಲ್ಪ ಉಪ್ಪು ಸೇರಿಸಿ. ಪಾತ್ರೆಯನ್ನು ಮುಚ್ಚಿ ಗೆಣಸು ಸಂಪೂರ್ಣವಾಗಿ ಮೃದುವಾಗುವವರೆಗೆ ಬೇಯಿಸಬೇಕು. ನಂತರ ಅದನ್ನು ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ಪೇಸ್ಟ್ ತರಹ ರುಬ್ಬಿಕೊಳ್ಳಬೇಕು. ಈ ಪೇಸ್ಟ್ ಅನ್ನು ಮತ್ತೆ ಪಾತ್ರೆಗೆ ಹಾಕಿ, ಹದಕ್ಕೆ ತಕ್ಕಂತೆ ಸ್ವಲ್ಪ ನೀರು ಸೇರಿಸಿ ಸಣ್ಣ ಉರಿಯಲ್ಲಿ ಕುದಿಯುವಾಗ ಅದಕ್ಕೆ ಕಾಳುಮೆಣಸಿನ ಪುಡಿ ಮತ್ತು ಫ್ರೆಶ್ ಕ್ರೀಮ್ ಅಥವಾ ತೆಂಗಿನ ಹಾಲು ಸೇರಿಸಿ ಚೆನ್ನಾಗಿ ಕೈಯಾಡಿಸಿ ಬಿಸಿಬಿಸಿಯಾದ ಸ್ವೀಟ್ ಪೊಟಾಟೊ ಸೂಪ್ ಸಿದ್ಧ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !