ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಟ್ಟಿಂಗ್ ಅಪ್ಲಿಕೇಶನ್ ಬಗ್ಗೆ ಪ್ರಚಾರ ಮಾಡಿದ ಕಾರಣಕ್ಕೆ ಪ್ರಕಾಶ್ ರೈ, ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ ಸೇರಿದಂತೆ ಹಲವು ಪ್ರಮುಖ ನಟ ನಟಿಯರು ಮತ್ತು ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳ ವಿರುದ್ಧ ಹೈದರಾಬಾದ್ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಒಟ್ಟು 25 ಮಂದಿ ನಟ, ನಟಿಯರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಎಲ್ಲರಿಗೂ ನೊಟೀಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಹೈದರಾಬಾದ್ನ ಮಿಯಾಪುರ ಪೊಲೀಸ್ ಠಾಣೆಯಲ್ಲಿ ಉದ್ಯಮಿ, ಸಾಮಾಜಿಕ ಕಾರ್ಯಕರ್ತ ಫಣಿಚಂದ್ರ ಎಂಬುವರು ದೂರು ದಾಖಲು ಮಾಡಿದ್ದರು. ಈ ದೂರು ಆಧರಿಸಿ ನಟ-ನಟಿಯರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ತೆಲುಗು ಚಿತ್ರರಂಗದ ಖ್ಯಾತ ನಟರಾದ ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ, ಪ್ರಕಾಶ್ ರೈ, ಕನ್ನಡತಿ ಪ್ರಣಿತಾ ಸುಭಾಷ್, ನಿಧಿ ಅಗರ್ವಾಲ್, ಮಂಚು ಲಕ್ಷ್ಮಿ, ಶ್ರೀಮುಖಿ, ನಟಿ ವರ್ಷಿಣಿ, ಸಿರಿ, ವಿಷ್ಣುಪ್ರಿಯಾ ಇನ್ನೂ ಹಲವಾರು ನಟ-ನಟಿಯರು ಮತ್ತು ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳ ವಿರುದ್ಧವೂ ಪ್ರಕರಣ ದಾಖಲಾಗಿದೆ. ಜೊತೆಗೆ ಎಲ್ಲರಿಗೂ ಸಹ ನೊಟೀಸ್ ಜಾರಿ ಮಾಡಲಾಗಿದೆ.
ತೆಲುಗಿನ ಜನಪ್ರಿಯ ಸಾಮಾಜಿಕ ಜಾಲತಾಣದ ಇನ್ಫ್ಲ್ಯುಯೆನ್ಸರ್, ಕಿರುತೆರೆ ತಾರೆಯರಾದ ಅನನ್ಯಾ ನಾಗಲ್ಲ, ಸಿರಿ ಹನುಮಂತು, ಶ್ರೀಮುಖಿ, ವರ್ಷಿಣಿ ಸೌಂದೆರ್ಜನ, ವಾಸಂತಿ ಕೃಷ್ಣ, ಶೋಭಾ ಶೆಟ್ಟಿ, ಅಮೃತಾ ಶೆಟ್ಟಿ, ನಯಾನಿ ಪಾವನಿ, ನೇಹಾ ಪಠಾಣ್, ಪಾಂಡು, ಪದ್ಮಾವತಿ, ಇಮ್ರಾನ್ ಖಾನ್, ವಿಷ್ಣು ಪ್ರಿಯಾ, ಹರ್ಷ ಸಾಯಿ, ಸನ್ನಿ ಯಾದವ್, ಶ್ಯಾಮಲಾ, ಟೇಸ್ಟಿ ತೇಜ, ರಿತು ಚೌಧರಿ, ಬಂಡಾರು ಸುಪ್ರಿತಾ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಎಲ್ಲರಿಗೂ ಸಹ ನೊಟೀಸ್ ನೀಡಿ, ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ಬೆಟ್ಟಿಂಗ್ ಅಪ್ಲಿಕೇಷನ್ಗಳನ್ನು ಪ್ರಚಾರ ಮಾಡುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ. ಹೀಗಾಗಿ ಈ ಆರೋಪಿಗಳ ವಿರುದ್ಧ 318(4), 112 read with BNS 3, 3(A), 4, Section 66D of the IT Act for Sections 318(4) BNS (ವಂಚಿಸಿ ವ್ಯಕ್ತಿಯನ್ನು ಮೋಸಗೊಳಿಸಿ ಆತನ ಆಸ್ತಿಯ ಹಸ್ತಾಂತರಕ್ಕೆ ಪ್ರಚೋದಿಸುವುದು 7 ವರ್ಷಗಳವರೆಗೆ ಶಿಕ್ಷೆ ನೀಡಬಹುದಾದ ಅಪರಾಧ), 3, 3(A), 4 TSGA (ತೆಲಂಗಾಣ ಗೇಮಿಂಗ್ ಕಾಯ್ದೆಯ ನಿಯಮ ಉಲ್ಲಂಘನೆ ಅಪರಾಧ), and 66D of the IT Act-2008 (ಸಂವಹನ ಯಂತ್ರಗಳನ್ನು ಬಳಸಿ ವಂಚಿಸುವುದು ಅಪರಾಧ. 3 ವರ್ಷಗಳವರೆಗೆ ಶಿಕ್ಷೆ) ಗಳ ಅಡಿಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.