ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಕಾರಣದಲ್ಲೀಗ ಛತ್ರಿಯದ್ದೇ ಸದ್ದು. ಮಂಡ್ಯದವರ ಛತ್ರಿ ಬುದ್ಧಿ ಬೇಡ ಎಂದಿದ್ದ ಡಿಕೆಶಿ ವಿರುದ್ಧ ಹಲವು ನಾಯಕರು ಸಿಡಿದೆದ್ದಿದ್ದಾರೆ. ಆದರೆ ಡಿಸಿಎಂ ಡಿ.ಕೆ.ಶಿವಕುಮಾರ್ ಇದಕ್ಕೆ ತಿರುಗೇಟು ನೀಡಿದ್ದಾರೆ.
ವಿಧಾನಸೌಧದಲ್ಲಿ ವಿಜಯೇಂದ್ರ ವಿರುದ್ಧ ಏಕವಚನದಲ್ಲೇ ಕಿಡಿಕಾರಿದ ಡಿಕೆಶಿ, ನನಗೆ ಮದ ಜಾಸ್ತಿ ಇದೆ, ನನಗೆ ಮದ ಇದ್ರೆ ಕಡಿಮೆ ಮಾಡಲಿ. ನಾನು ಹೇಳಿರುವುದನ್ನ ಇವನು ನೋಡಿದ್ದಾನಾ. ಅದೆಲ್ಲ ಸುಳ್ಳು, ಯಾವ ಛತ್ರಿನೂ ಇಲ್ಲ. ಛತ್ರಿ ಅಂತಾ ನಾನು ಯಾರಿಗೆ ಅಂದಿದ್ದೀನಿ? ನನಗೆ ಬೇಕಾದವರಿಗೆ ಹೇಳುತ್ತೇನೆ ಎಂದು ಮಂಡ್ಯದವರ ಛತ್ರಿ ಬುದ್ಧಿ ಗೊತ್ತು ಎಂಬ ಹೇಳಿಕೆಯನ್ನ ಡಿಕೆಶಿ ಸಮರ್ಥಿಸಿಕೊಂಡಿದ್ದಾರೆ.