Tuesday, August 16, 2022

Latest Posts

ಹುಷಾರು, ನೀವು ಇದನ್ನು ಓದುತ್ತಿರುವಾಗಲೇ ಕ್ಯಾಮರಾ ಆನ್ ಆಗಿರಬಹುದು!!

ಹೊಸದಿಗಂತ ಡಿಜಿಟಲ್ ಡೆಸ್ಕ್:
ನೀವು ಈ ಸುದ್ದಿ ಓದುತ್ತಿರುವಾಗಲೇ ನಿಮ್ಮ ಮೊಬೈಲ್ ಕ್ಯಾಮರಾ ಆನ್ ಆಗಿರಬಹುದು!
ಚಿತ್ರ ಕ್ಲಿಕ್ಕಿಸುತ್ತಿರಬಹುದು, ವಿಡಿಯೋ ರೆಕಾರ್ಡ್ ಆಗುತ್ತಿರಬಹುದು…
ಎಸ್, ಜಾಗತಿಕವಾಗಿ ಹೊಸ ಸ್ಪೈವೇರ್ ಸದ್ದಿಲ್ಲದೆ ಸದ್ದು ಮಾಡುತ್ತಿದೆ. ಅದರ ಹೆಸರು ಫೋನ್ ಸ್ಪೈ.
ಈ ಬೇಹುಗಾರಿಕೆ ಆಪ್ ಬಗ್ಗೆ ತಂತ್ರಜ್ಞರು, ಮೊಬೈಲ್ ಗ್ರಾಹಕರಿಗೆ ಎಚ್ಚರಿಕೆ ನೀಡಿದ್ದಾರೆ. ನಿಮ್ಮದು ಆಂಡ್ರಾಯ್ಡ್ ಫೋನ್ ಆಗಿದ್ದರೆ ಇದು ಸುಮಾರು ೨೦ ಆಪ್‌ಗಳೊಂದಿಗೆ ನಿಮ್ಮ ಮೊಬೈಲ್ ಸೇರಿರಬಹುದು. ಇದರ ಮೊದಲ ಕೆಲಸವೆಂದರೆ ಮೊಬೈಲ್ ಸೆಕ್ಯೂರಿಟಿ ಆಪ್‌ಗಳನ್ನು ಅನ್ ಇನ್ ಸ್ಟಾಲ್ ಮಾಡುವುದು. ಬಳಿಕ ಫೋನ್ ಕ್ಯಾಮೆರಾದ ನಿಯಂತ್ರಣ ಪಡೆದುಕೊಳ್ಳುವುದು. ಹೀಗಾಗಿ ಎಚ್ಚರಿಕೆ ಅಗತ್ಯ ಎನ್ನುತ್ತಾರೆ ತಂತ್ರಜ್ಞರು.
ತಿಳಿಯುವುದು ಹೇಗೆ?
ಇದು ಫೋನ್ ಒಳಗೆ ಪ್ರವೇಶವಾಗಿದ್ದಲ್ಲಿ ಅಪ್ಲಿಕೇಷನ್ ಇನ್‌ಸ್ಟಾಲ್ ಮಾಡುವಾಗ ಲೆಕ್ಕಕ್ಕಿಂತ ಹೆಚ್ಚು ಅನಗತ್ಯವಾದ ಅನುಮತಿ ಕೇಳುತ್ತದೆ. ಈ ಸಂದರ್ಭ ಎಲ್ಲಾದಕ್ಕೂ ಅನುಮತಿ ನೀಡಿದರೆ ಒಳನುಗ್ಗುತ್ತದೆ. ಬಳಿಕ ಬ್ಯಾಕ್ ಗ್ರೌಂಡ್‌ನಲ್ಲಿದ್ದುಕೊಂಡು ತನ್ನ ಕೆಲಸ ಮುಂದುವರಿಸುತ್ತದೆ. ಹೀಗಾಗಿ ಯಾವುದೇ ಅಪ್ಲಿಕೇಷನ್ ಡೌನ್ಲೋಡ್ ಮಾಡುವಾಗ ಎಚ್ಚರಿಕೆ ಅತೀ ಅಗತ್ಯ ಎನ್ನುತ್ತಾರೆ ತಂತ್ರಜ್ಞರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss