ಹುಷಾರು, ನಾಳೆ ನಿಮ್ಮ ವಾಟ್ಸಾಪ್ ಖಾತೆಯೂ ಬ್ಯಾನ್ ಆಗಬಹುದು…

ಹೊಸದಿಗಂತ ಡಿಜಿಟಲ್ ಡೆಸ್ಕ್:

ತನ್ನ ನಿಯಮ ನಿಬಂಧನೆ ಉಲ್ಲಂಘಿಸಿದ ಖಾತೆಗಳನ್ನು ಸಾಮಾಜಿಕ ಜಾಲತಾಣದ ದಿಗ್ಗಜ ವಾಟ್ಸಾಪ್ ಮುಲಾಜಿಲ್ಲದೆ ಬ್ಯಾನ್ ಮಾಡುತ್ತಿದ್ದು,
ಫೆಬ್ರವರಿ ಒಂದೇ ತಿಂಗಳಿನಲ್ಲಿ ಬರೋಬ್ಬರಿ 10 ಲಕ್ಷಕ್ಕೂ ಅಧಿಕ ಭಾರತೀಯರ ಖಾತೆಯನ್ನು ಸ್ಥಗಿತಗೊಳಿಸಿದೆ. ಜನವರಿ ತಿಂಗಳಿನಲ್ಲಿ ಬ್ಯಾನ್ ಆಗಿರುವ ಭಾರತೀಯರ ಝಾತೆಗಳು 18,58,000!
ಮೆಟಾ ಒಡೆತನದ ಈ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್, ತನ್ನ ಬಳಕೆದಾರರಿಗಾಗಿ ಆಕರ್ಷಕ ಫೀಚರ್‌ಗಳನ್ನು ಪರಿಚಯಿಸುತ್ತಿದ್ದು, ಜೊತೆಜೊತೆಯಲ್ಲಿ  ಬಳಕೆದಾರರು ಸಲ್ಲಿಸುವ ದೂರುಗಳನ್ನು ಗಂಭೀರವಾಗಿಯೇ ಪರಿಗಣಿಸಿ ಕಠಿಣ ಕ್ರಮ ಕೈಗೊಳ್ಳುತ್ತಿದೆ.
ಯಾಕೆ ಬ್ಯಾನ್?
ವಾಟ್ಸಾಪ್ ಸರ್ಕಾರಕ್ಕೆ ಸಲ್ಲಿಸಿರುವ ಫೆಬ್ರವರಿ ತಿಂಗಳ ಮಾಸಿಕ ವರದಿಯಲ್ಲಿ, ಸೊಶೀಯಲ್ ಮೀಡಿಯಾ ನಿಯಮ ಉಲ್ಲಂಘನೆ ಜೊತೆಗೆ ವಾಟ್ಸಾಪ್ ನಿಯಮಗಳನ್ನು ಉಲ್ಲಂಘಿಸಿರುವವರ ಖಾತೆಗಳನ್ನು ನಿಷೇಧಿಸಿದ್ದೇವೆ ಎಂದು ಹೇಳಿದೆ.
ವಾಟ್ಸಾಪ್ ನಿಯಮಗಳು ಮತ್ತು ಷರತ್ತುಗಳ ಪ್ರಕಾರ, ಅಶ್ಲೀಲ, ಕಾನೂನು ಬಾಹಿರ, ಮಾನಹಾನಿಕರ, ಬೆದರಿಕೆಹೊಂದಿದ, ಕಿರುಕುಳ, ದ್ವೇಷಪೂರಿತ ಸಂದೇಶಗಳನ್ನು ಕಳುಹಿಸಿದರೆ ನಿಮ್ಮನ್ನು ವಾಟ್ಸ್‌ಆಯಪ್ ಬ್ಯಾನ್ ಮಾಡಲಾಗುತ್ತದೆ. ಜೊತೆಗೆ ವಾಟ್ಸಾಪ್ ಬಳಕೆದಾರರು ಮಾಡುವ ದೂರಿನ ಆಧಾರದ ಮೇಲೂ ಕೂಡ ಅನೇಕ ಅಕೌಂಟ್‌ಗಳನ್ನು ನಿಷೇಧ ಮಾಡಲಾಗುತ್ತದೆ.
ನಿಯಮಗಳ ಹೊರತಾದ ಸಂದೇಶ ರವಾನೆಯಾದರೆ ನಾಳೆ ನಿಮ್ಮನ್ನೂ ಜೈಲಿಗಟ್ಟಬಹುದು. ಯಾರಾದರೂ ದೂರು ನೀಡಿದರೆ ನಿಮ್ಮ ಖಾತೆಯನ್ನೂ ನಿಷೇಧಿಸಬಹುದು. ಯಾವುದಕ್ಕೂ ಹುಷಾರು…

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!