ಹೊಸದಿಗಂತ ವರದಿ ಕಲಬುರಗಿ:
ದೇಶಕ್ಕಾಗಿ ಕಿರಿಯ ವಯಸ್ಸಿನಲ್ಲೇ ನೇಣಿಗೆ ಶರಣಾದ ಕ್ರಾಂತಿಕಾರಿ ಶಹೀಧ್ ಭಗತ್ ಸಿಂಗ್ ಅವರ ಜನ್ಮದಿನಾಚರಣೆ ಅಂಗವಾಗಿ ನಾಥುರಾಮ್ ಗೋಡ್ಸೆ ಭಾವಚಿತ್ರವನ್ನು ಇಟ್ಟು,ಹೂವಿನ ಹಾರ ಹಾಕಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ಮಾಡಿದ ಘಟನೆ ಜಿಲ್ಲೆಯಲ್ಲಿ ಗುರುವಾರ ನಡೆದಿದೆ.
ಜಿಲ್ಲೆಯ ಜೇವರ್ಗಿ ತಾಲೂಕಿನ ಮಂದೇವಾಲ್ ಗ್ರಾಮದ ಹನುಮಾನ್ ದೇವಸ್ಥಾನದ ಮುಂಭಾಗದಲ್ಲಿ ನಾಥುರಾಮ್ ಗೋಡ್ಸೆ ಭಾವಚಿತ್ರವನ್ನು ಇಟ್ಟು ಪೂಜೆ ಸಲ್ಲಿಸುವ ಮೂಲಕ ಸ್ವಾತಂತ್ರ್ಯ ಹೋರಾಟಗಾರರ ಸಾಲಿನಲ್ಲಿ ಇಟ್ಟು ಅದ್ದೂರಿ ಮೆರವಣಿಗೆ ಮಾಡಲಾಗಿದೆ.
ಮಂದೇವಾಲ್ ಗ್ರಾಮದ ಗ್ರಾಮಸ್ಥರು ಒಂದೊಂದೇ ಎತ್ತಿನ ಬಂಡಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರವನ್ನು ಇಟ್ಟು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದ್ದು, ಭಗತ್ ಸಿಂಗ್, ಸುಖದೇವ್, ರಾಜಗುರು,ವಿನಾಯಕ ದಾಮೋದರ ಸಾವರ್ಕರ್, ಚಂದ್ರಶೇಖರ ಆಜಾದ್,ಸುಭಾಷ್ ಚಂದ್ರ ಬೋಸ್,ರಾಣಿ ಚೆನ್ನಮ್ಮ, ಸರ್ದಾರ್ ಪಟೇಲ್,ಸಂಗೋಳ್ಳಿ ರಾಯಣ್ಣ ಸೇರಿದಂತೆ ಇತರೆ ಹೋರಾಟಗಾರರ ಭಾವಚಿತ್ರವನ್ನು ಇಟ್ಟು ಹೂವಿನ ಹಾರ ಹಾಕಿ ಬೀದಿಗಳಲ್ಲಿ ಮೆರವಣಿಗೆ ಮಾಡಿದ್ದಾರೆ.
ಸ್ಥಳಕ್ಕೆ ನೆಲೋಗಿ ಪೋಲಿಸ್ ಠಾಣೆಯ ಪೋಲೀಸರು ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ.