ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾನು ಮುಖ್ಯಮಂತ್ರಿಯಾಗಿದ್ದಾಗ ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ರೂಪಿಸಲಾಗಿದ್ದ ಭಾಗ್ಯಲಕ್ಷ್ಮಿ ಬಾಂಡ್ ಯೋಜನೆಯನ್ನು ಸರ್ಕಾರ ರದ್ದುಗೊಳಿಸಿತ್ತು. ಸರ್ಕಾರ ಈಗ ಎಷ್ಟು ದಿವಾಳಿಯಾಗಿದೆ ಎಂದರೆ ಸಾಲ ತೀರಿಸಲು ಹಣವಿಲ್ಲ. ಆದರೆ ನಾವು ಹೋರಾಟ ಮಾಡಿಯಾದರೂ ಭಾಗ್ಯಲಕ್ಷ್ಮಿ ಬಾಂಡ್ ಹಣವನ್ನು ಕೊಡಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ಎರಡನೇ ದಿನ ಬಳ್ಳಾರಿಯ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಸಿ ತಾರಾನಗರ, ಬನ್ನಿಹಟ್ಟಿ, ತಾಳೂರು ಗ್ರಾಮಗಳಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು.
ಭಾಗ್ಯಲಕ್ಷ್ಮಿ ಬಾಂಡ್ ಯೋಜನೆಯು ಪ್ರತಿ ಕುಟುಂಬಕ್ಕೆ ಕಡ್ಡಾಯವಾಗಿ ಹೊಂದಿರಬೇಕಾದ ಯೋಜನೆಯಾಗಿದೆ. ತಮ್ಮ ಮಗಳು ಹುಟ್ಟಿದಾಗ ಮೂಗು ಮುರಿದುಕಕೊಳ್ಳುವ ಜನರು ಈ ವ್ಯವಸ್ಥೆಯ ಪರಿಚಯದಿಂದ ನಿರಾಳರಾಗಿದ್ದಾರೆ, ಪ್ರಸ್ತುತ ಮೆಚ್ಯೂರಿಟಿ ಹಣಕ್ಕಾಗಿ ಸಾವಿರಾರು ಕುಟುಂಬಗಳು ಕಾಯುತ್ತಿವೆ. ಈ ಸರ್ಕಾರ ಹಣ ಕೊಡುವುದಿಲ್ಲ, ಕೊಡುವವರೆಗೂ ನಾವು ಬಿಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು.